Posts

Showing posts from October 31, 2011

ಮುತ್ತಿಗೆ ನಮಗೂ ಬೇಕೆ?: ಮುಂಬೈಗೆ ಬಂತು 'ಆಕ್ಯುಪೈ ವಾಲ್ ಸ್ಟ್ರೀಟ್' ಪ್ರತಿಭಟನೆ

'ಅಮೆರಿಕದ ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಕ್ಕೆ ಹಲವಾರು ಕಾರಣಗಳಿವೆ. ಸಾಮಾನ್ಯ ಜನರಿಗೆ ವೆಚ್ಚ ಕಡಿತ ಮಾಡುವುದಕ್ಕೆ ಹೇಳಿರುವಂಥ ಸಂದರ್ಭದಲ್ಲಿ ಬ್ಯಾಂಕರ್ ಗಳಿಗೆ, ಕಾರ್ಪೊರೇಟ್ ಗಳಿಗೆ ಲಕ್ಷಾಂತರ ಡಾಲರ್ ನೆರವು ಸಿಗುತ್ತಿರುವ ಕಾರಣದಿಂದಾಗಿ ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುವ ಭೀತಿಯಿದೆ. ಐರೋಪ್ಯ ರಾಷ್ಟ್ರಗಳಲ್ಲಿಯೂ ಇದೇ ಆತಂಕವಿದೆ. ಈ ಪ್ರತಿಭಟನೆ ನಿಲ್ಲಬೇಕು ಮತ್ತು ಸಮಸ್ಯೆ ನಿವಾರಣೆಯಾಗಬೇಕು ಎಂದಾದರೆ ವಿಶ್ವಾಸಾರ್ಹವಾದ, ಸದೃಢವಾದ ವ್ಯವಸ್ಥೆಯೊಂದರ ಅಗತ್ಯವಿದೆ....' ಇದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಮೆರಿಕದಲ್ಲಿನ ಪ್ರತಿಭಟನೆಯ ಬಗ್ಗೆ ಕೊಟ್ಟಂಥ ಪ್ರತಿಕ್ರಿಯೆ. ಈ ಮಾತಿನಲ್ಲಿ ವಾಸ್ತವಾಂಶವಿದೆ  ಜೊತೆಗೆ ಒಂದು ರೀತಿಯ ನಿರ್ಲಕ್ಷ್ಯವಿದೆ. ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿದ್ದಾರೆ. ವಿವಿಧ ದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಪೊರೇಟ್ ಗಳ ಮೇಲೆ, ಅವುಗಳಿಗೆ ಪ್ರೋತ್ಸಾಹ ಕೊಡುತ್ತಿರುವಂಥ ಸರಕಾರಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಕ್ತ ಆರ್ಥಿಕತೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ನಿಜ, ಅಮೆರಿಕ, ಐರೋಪ್ಯ ರಾಷ್ಟ್ರಗಳಲ್ಲಿ ನಿರುದ್ಯೋಗದ ಭೀತಿಯಿದೆ. ಸಿಂಗ್ ಅವರ ಈ ಮಾತು ನಿಜ. ಆದರೆ ಭಾರತದ ದೃಷ್ಟಿಯಲ್ಲಿ ಅವರೇನೂ ಚಿಂತನೆ ನಡೆಸಿದಂತಿಲ್ಲ.