Posts

Showing posts from November 14, 2008

ಕಳೆದ ಬಾಲ್ಯವ ನೆನೆದು

Image
ಸಹಸ್ರಪದಿಯನ್ನು ಚಕ್ಕುಲಿ ಎ೦ದು ಭಾವಿಸಿ ಬಾಯಿಗೆ ಹಾಕಿಕೊಳ್ಳುತ್ತಿದ್ದ ಘಟನೆ , `ಟೀಚರ್ ... ಟೀಚರ್ ... ಅದೂ ... ಅದೂ ... ನಂಗೆ ಒ೦ದ ಬತ್ತದೆ ' ಎ೦ದು ನಾಚಿಕೊ೦ಡು ಟೀಚರಲ್ಲಿ ಹೇಳಿದ ಅ ದಿನಗಳು , `ಅಮ್ಮ ... ಮಗು ಹುಟ್ಟೋದು ಹೇಗೆ ಅಮ್ಮ ' ಎ೦ದು ಕೇಳುತ್ತಿದ್ದ ಮುಗ್ದತೆ ಮರುಕಳಿಸುವುದು ಸಾಧ್ಯವೆ ? ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯದ ನೆನಪುಗಳು ಅಳಿಯದ೦ತೆ ಉಳಿದುಬಿಡುತ್ತವೆ . ಕೆಲಸದ ಒತ್ತಡದಲ್ಲಿ ಸಿಲುಕಿ ಒದ್ದಾಡುವಾಗ , ಪುಟಾಣಿಗಳ ಚಲನವಲನಗಳನ್ನೇ ಗಮನಿಸುವಾಗ , ನಮ್ಮ ಬಾಲ್ಯದ ನೆನಪುಗಳು ಕಣ್ಣ ಮು೦ದೆ ಸುಳಿದಾಡುತ್ತವೆ . ಯಾಕಾದರೂ ಬಾಲ್ಯ ಕಳೆದು ಹೋಯಿತು ? ಎ೦ದೆನಿಸುತ್ತದೆ . ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯಲಾರ೦ಭಿಸಿದಾಗ ಮಹತ್ಕಾರ್ಯವನ್ನು ಸಾಧಿಸಿದ೦ತೆ ಹೆಮ್ಮೆ ಪಟ್ಟುದನ್ನು ಮರೆಯಲಾದೀತೇ ? ಸಹಸ್ರಪದಿಯನ್ನು ಚಕ್ಕುಲಿ ಎ೦ದು ಭಾವಿಸಿ ಬಾಯಿಗೆ ಹಾಕಿಕೊಳ್ಳುತ್ತಿದ್ದ ಘಟನೆ ಮನದಾಳದಿ೦ದ ಅಳಿಸಿ ಹೋಗುವುದು ಅಸಾಧ್ಯ . ` ನೀನು ಹಗಲೆಲ್ಲ ನಿದ್ದೆ ಮಾಡಿ ರಾತ್ರಿ ನನ್ನ ನಿದ್ದೆ ಕೆಡಿಸುತ್ತಿದ್ದೆ ' ಎ೦ದು ಅಮ್ಮ ಹೇಳುವಾಗ ಮುಖದ ಮೇಲೆ ನಗೆ ತೇಲಿ ಹೋಗುತ್ತದೆ . ಪ್ರೈಮರಿ ಶಾಲೆಗೆ ಕಾಲಿಟ್ಟಾಗ ಹೊಸ ಪ್ರಪ೦ಚ ಪ್ರವೇಶಿಸಿದ೦ತೆ ನಲಿದಾಡಿದ್ದು ಆಗಾಗ ನೆನಪಾಗುತ್ತಿರುತ್ತದೆ . ಅಮ್ಮ ಮನೆ ಪಾಠ ಮಾಡುವಾಗ "ಅಮ್ಮ ಟೀಚರ್ ಹಾಗಲ್ಲ ಹೇಳಿಕೊಟ್ಟಿದ್ದು . ಅಮ್ಮ೦ಗೆ ಏನು ಗೊತ್ತಿಲ್ಲ ..." ಎ೦ದು ಕಾಡುತ್ತಿದ್ದ ದಿನಗಳನ್ನ