Posts

Showing posts from August 18, 2011

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?

Image
ಕರ್ನಾಟಕ ಆಡಳಿತಾತ್ಮಕ ಸೇವಾ(ಕೆಎಎಸ್) ಪರೀಕ್ಷೆಯ ಪಠ್ಯ ಬದಲಾಗುತ್ತಿದೆ. ಅಂದರೆ ಅದು ಭಾರತೀಯ ಆಡಳಿತಾತ್ಮಕ ಸೇವಾ (ಐಎಎಸ್) ಪರಿಕ್ಷೆಯ ಮಟ್ಟಕ್ಕೆ ಬರುತ್ತಿದೆ. ಆದರೆ ಐಎಎಸ್, ಕೆಎಎಸ್... ಮುಂತಾದಕ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನವರಲ್ಲಿ ಅಳುಕಿದೆ. ಹೇಗೆ ಎದುರಿಸುವುದು ಎಂಬ ಗೊಂದಲದಲ್ಲಿದೆ ಯುವ ಸಮಾಜ.        ಇಂತಿರುವಾಗ ಕೆಎಎಸ್ ಕೂಡಾ ಐಎಎಸ್ ಮಟ್ಟದ ಪಠ್ಯ ಹೊಂದಿದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರ್ಧರಿಸುವ ಅಭ್ಯರ್ಥಿಗಳು ಯಾವ ರೀತಿಯ ಸಿದ್ಧತೆ ನಡೆಸಬೇಕು? ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಅಳುಕನ್ನು ಅಭ್ಯರ್ಥಿಗಳ ಮನಸ್ಸಿನಿಂದ ತೆಗೆದು ಹಾಕುವ ಬಗೆ ಹೇಗೆ? ಇವೇ ಮುಂತಾದ ವಿಚಾರಗಳ ಬಗ್ಗೆ ಬೆಂಗಳೂರಿನ ವಿಜಯನಗರದ ಎಂ ಸಿ ಬಡಾವಣೆಯಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಕೇಂದ್ರ ಆಸ್ಪೈರ್ ಸ್ಟಡಿ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ದಡ್ಡೆ ಅವರನ್ನು `ಕನ್ನಡಪ್ರಭ' ಮಾತಾಡಿಸಿತು. ಶಿವಶಂಕರ್ ದಡ್ಡೆ  - ಕೆಎಎಸ್ ಪಠ್ಯ ಯಾವಾಗಿಂದ ಬದಲಾಗುತ್ತಿದೆ? ಮುಂದಿನ ನೋಟಿಫಿಕೇಶನ್, ಅಂದರೆ ಪ್ರಿಲಿಮಿನರಿ ಪರೀಕ್ಷೆಗೆ ಸೇರ್ಪಡೆಯಾಗುವ ಮುಂದಿನ ಬ್ಯಾಚ್ನ ಅಭ್ಯರ್ಥಿಗಳಿಗೆ ಹೊಸ ಪಠ್ಯ ಇರುವ ಸಾಧ್ಯತೆಗಳಿವೆ. ಈಗಾಗಲೇ ಹೊಸ ಪಠ್ಯ ಸಿದ್ಧವಾಗಿದೆ. ಆ ಪಠ್ಯ ಜಾರಿಯಾಗುವುದಷ್ಟೇ ಬಾಕಿ. ಸುಮಾರು 200 ಹುದ್ದೆಗಳಿಗೆ ಸರಕಾರ ಈಗಾಗಲೇ ಅನುಮತಿ ಕೊಟ್ಟಿದೆ. ಈ ತಿಂಗಳ ಕೊನೆಯಲ್ಲಿ ಅಥವಾ ಮುಂ