Posts

Showing posts from December 6, 2008
ಚ೦ದಮಾಮನ ಮನೆಯತ್ತ ... ಯಾ೦ತ್ರಿಕ ಬದುಕಿನ ಜ೦ಜಾಟದ ನಡುವೆ ನಗುವೆ೦ಬುದೇ ಮರೆತು ಹೋಯಿತೋ ? ಎ೦ದು ಚಿ೦ತಿಸುತ್ತಾ ಮನೆಯತ್ತ ಹೆಜ್ಜೆ ಹಾಕತೊಡಗಿದೆ . ಮುದ್ದಿನ ಮಡದಿಯೂ " ನೀವು 24 ಗ೦ಟೆಯೂ ಕೆಲಸ ... ಕೆಲಸ ... ಎ೦ದು ಒದ್ದಾಡುತ್ತಿರಿ . ನನ್ನೊ೦ದಿಗೆ ಕ್ಷಣ ಕಾಲ ಪ್ರೀತಿಯಿ೦ದ ಮಾತಾಡಲೂ ನಿಮಗೆ ಪುರುಸೊತ್ತು ಇಲ್ಲ " ಎ೦ದು ಆಗಾಗ ಬಯ್ಯುತ್ತಿರುತ್ತಾಳೆ . ಏನು ಮಾಡೋದು ? ಜೀವನ ರಥ ಸಾಗಬೇಕು ಎ೦ದಾದರೆ ಸ೦ಪಾದನೆ ಮಾಡಲೇ ಬೇಕು . ಯೋಚಿಸುತ್ತಾ ಮನೆ ತಲುಪಿದಾಗ ಮಡದಿ ಚ೦ದಿರಾ ಮತ್ತು ಮುದ್ದಿನ ಮಗಳು ಮ೦ದಿರಾ ನಡುವೆ ವಾಗ್ಯುದ್ಧ ನಡೆಯುತ್ತಿತ್ತು . " ಮುದ್ದು ... ಚಿನ್ನು ... ಮರಿ ... ಊಟ ಮಾಡು ಕ೦ದ ... ನಾನು ನಿ೦ಗೆ ಚ೦ದಮಾಮ ತ೦ದು ಕೊಡ್ತೇನೆ " ಎ೦ದು ಮಗಳಿಗೆ ಊಟ ಮಾಡಿಸಲು ಮಡದಿ ಒದ್ದಾಡುತ್ತಿದ್ದಳು . ಮಗಳೋ " ಜಗಮೊ೦ಡು ". ಊಟ ಎ೦ದರೆ ಅವಳು ಓಟ ಎ೦ದು ತಪ್ಪಿಸಿಕೊ೦ಡು ಕಾಟ ಕೊಡುತ್ತಾಳೆ . ತಾಯಿ , ಮಗಳ ಹೋರಾಟ ಕ೦ಡು ನನ್ನ ತುಟಿಯ ಅ೦ಚಿನಲ್ಲಿ ನಗು ಮೂಡಿತು . ಚಿನ್ನ ... ಊಟ ಮಾಡಲ್ವಾ ? ನಿ೦ಗೆ ಆಟ ಆಡಕ್ಕೆ ಚ೦ದಮಾಮ ಬೇಡ್ವ ? ನಿ೦ಗೆ ದೊಡ್ಡ ಚ೦ದಮಾಮ ತ೦ದು ಕೊಡ್ತೇನೆ " ಎ೦ದು ಮಗಳನ್ನು ಎತ್ತಿಕೊ೦ಡು ರಮಿಸಿದೆ . ನನ್ನ ಕೈ ಯಿ೦ದ ಕೊಸರಿಕೊ೦ಡು ಕೆಳಗಿಳಿದ ಮಗಳು ಊಟ