Posts

Showing posts from October 24, 2011

ಅಮರಿಕೊಂಡ ಅಮೆರಿಕ

ಮುಕ್ತ ಆರ್ಥಿಕತೆ ಜಗತ್ತಿನಲ್ಲಿ ಅಂಬೆಗಾಲಿಟ್ಟಾಗಲೇ ಅದರ ಬಗ್ಗೆ ವ್ಯಾಮೋಹ ಗಾಢವಾಗಿತ್ತು. ಈ ವ್ಯಾಮೋಹದ ಪರಿಣಾಮವೇ ಅದು ಏಕಾಏಕಿ ದೈತ್ಯಾಕಾರ ತಾಳಿ ಬೆಳೆಯುವಂತಾಯಿತು. ಇದೀಗ ಅದೇ ಮುಕ್ತತೆ ವಿರುದ್ಧ ಕೂಗು ಆರಂಭವಾಗಿದೆ. ವಾಲ್ ಸ್ಟ್ರೀಟ್ ಗೇ ಮುತ್ತಿಗೆ ಹಾಕುವಂಥ ಆಂದೋಲನಗಳು ವೇಗ ಪಡೆದುಕೊಳ್ಳುತ್ತಿವೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸುವ ಕೂಗು ಈ ಗುಂಪಿನಿಂದ ಕೇಳಿಸುತ್ತಿದೆ. ಈ ತಿಂಗಳಲ್ಲೇ ಅಮೆರಿಕದ ಸುಮಾರು 70 ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆದಿದೆ. ಹಾಗಿದ್ದರೆ ಮುಕ್ತ ಆರ್ಥಿಕತೆಯ ವಿರುದ್ಧ ಜನರು ಒಟ್ಟಾಗುತ್ತಿದ್ದಾರೆಯೇ? ಅದರಿಂದಾದಂಥ ಸಮಸ್ಯೆಗಳು ಏನು? ಕಾರ್ಪೊರೇಟ್ ವಲಯಗಳಿಂದ ಲಾಭ ಆಗಿಲ್ಲವೇ? ಹಿನ್ನೆಲೆ ಇಷ್ಟು: ಪ್ರಜಾಪ್ರಭುತ್ವದ ಮೇಲೆ ಕಾರ್ಪೊರೇಟ್ ವ್ಯವಸ್ಥೆ ಕೆಟ್ಟ ಪ್ರಭಾವ ಬೀರುತ್ತಿದೆ ಎಂದು ಅನಿಸತೊಡಗಿತು. ಇದರ ವಿರುದ್ಧ ಧ್ವನಿಯೆತ್ತಿದ್ದು ಕೆನಡಾ ಮೂಲದ ಅಡ್ ಬಸ್ಟರ್ಸ್ ಮೀಡಿಯಾ ಫೌಂಡೇಶನ್. ಪ್ರಜಾಪ್ರಭುತ್ವದ ಮೇಲಿನ ಕಾರ್ಪೊರೇಟ್ ಪ್ರಭಾವದ ವಿರುದ್ಧ ಹೋರಾಡುವುದಕ್ಕಾಗಿ ವಾಲ್ ಸ್ಟ್ರೀಟ್ ಗೆ ಶಾಂತಿಯುತವಾಗಿ ಮುತ್ತಿಗೆ ಹಾಕುವ ಪ್ರಸ್ತಾಪ ಮುಂದಿಟ್ಟಿತು. ಇದಕ್ಕೆ ವ್ಯಾಪಕ ಬೆಂಬಲ ಸಿಕ್ಕಿ ಇದೀಗ ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕುವ ಆಂದೋಲನಗಳು ನಡೆಯುತ್ತಿವೆ. 2008ರಲ್ಲಿ ಜಾಗತಿಕ ಆರ್ಥಿಕ ಮಹಾಪತನ ಎದುರಾದಾಗ ಒಂದು ಭರವಸೆ ಇತ್ತು. ಅದು- ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಗೆ ವಾಸ್ತವ ಸ