Posts

Showing posts from November 18, 2008

ಏಕೆ ಮುನಿದಿರುವೆ ....

Image
ಏಕೆ ಮುನಿದಿರುವೆ ಮಾತು ಮರೆತಿರುವೆ ಪ್ರೀತಿಯ ತ೦ತಿ ಮೀಟಿ ಹಾಡು ಎನ್ನ ಕೋಗಿಲೆ [ಪಲ್ಲವಿ ....] ಎದೆಯಾಳದಿ ಮೂಡಿಹ ಈ ಪ್ರೇಮ ಕಾವ್ಯಕೆ ನೀ ಸಿರಿ ಕ೦ಠದ ದನಿ ನೀಡೆಯಾ ಕೋಗಿಲೆ [೧ ....] ಮಾರನ ಹೂ ಬಾಣಕೆ ಸೋತು ಶರಣಾಗಿರುವೆ ರತಿಯಾಗಿ ಬಾ , ನೀ ಎನ್ನ ಹೃದಯದ ತಾಣಕೆ [೨ ....] ಉರಿಯುತಿಹೆ ನು ನಾ ವಿರಹಾಗ್ನಿಯ ತಾಪಕೆ ಒಲವಿನ ಸುಧೆಯಾಗಿ ಕಾವಾರಿಸು ಬೇಗನೆ [೩ ....] ನನ್ನುಸಿರ ತಾಳಕೆ ನಿನ್ನುಸಿರ ಲಾಸ್ಯವ ಬೆರೆಸಿ ಜತೆಯಾಗು ಬಾ ಎನ್ನ ಬಾಳ ಪಯಣಕೆ [೪ ....]

ಬಾ ಎನ್ನ ಹೃದಯಕೆ ....

Image
ಪರಿ ಕಾಡುತಿಹೆ ನೀನೇತಕೆ ಬಾ ಪ್ರಿಯ ಎನ್ನ ಸನಿಹಕೆ [ಪಲ್ಲವಿ ....] ಮರುಳಾದೆ ಇನಿಯ ಕುಡಿಗಣ್ಣ ನೋಟಕೆ ಮನ ಸೋತೆ ನಾ ನಿನ್ನ ನಗುವಿನ ಮೋಡಿಗೆ [೧ ....] ನವಿರಾದ ಕ೦ಪನವು ತನುವಲ್ಲಿ ಮೂಡಿದರು ನಿನ್ನೊಲವ ಕಾವಿಗೆ ಕರ - ಗುವ ಕಾತುರವು ಎನಗೆ [೨ ....] ಬರಡಾದ ಎದೆಯಲ್ಲಿ ಪ್ರೀತಿಯ ಸೆಲೆ ಯುದಿಸಿ ತೊರೆಯಾಗಿ ಹರಿಯುತಿದೆ ಮನವೆ೦ಬ ಬನದಲ್ಲಿ [೩ ....] ಪ್ರೇಮ ಬಾಣವ ಎಸೆದು ಮೌನವಾದೆ ಏತಕೆ ಎನ್ನ ತುಡಿತವ ಅರಿತು ಬಾ ಎನ್ನ ಹೃದಯಕೆ [೪ ....][