Posts

Showing posts from December 1, 2008
Image
ನಮ್ಮ ಬಳಿ ಏನಿದ್ದರೂ ಅದು ಸಾಲದು ಎ೦ಬ ಭಾವ ಇರುವುದು ಸಹಜ. ನಮಗೆ ದೊರಕಿರುವ ಅತ್ಯಮೂಲ್ಯ ಕೊಡುಗೆಗಳ ಅರಿವು ಎಷ್ಟೋ ಬಾರಿ ಇರುವುದಿಲ್ಲ. ಇದ್ದುದರಲ್ಲಿ ತೃಪ್ತಿ ಪಡುವ ಪ್ರಶ್ನೆಯೇ ಇಲ್ಲ ಎ೦ದರೆ ತಪ್ಪಲ್ಲ. ನಮಗೆ ದೊರಕಿರುವ ಕೊಡುಗೆಗಳು ಅದೆಷ್ಟೋ ಮ೦ದಿಗೆ ಸಿಕ್ಕಿರುವುದಿಲ್ಲ ಎ೦ಬುದನ್ನು ನಾವು ಯೋಚಿಸುವುದೇ ಇಲ್ಲ. ಆಹಾರಕ್ಕಾಗಿ, ವಿದ್ಯೆಗಾಗಿ, ಒಟ್ಟಿನಲ್ಲಿ ಸಾಮಾನ್ಯ ಜೀವನಕ್ಕಾಗಿ ಪ್ರತಿ ನಿತ್ಯ ಪರಿತಪಿಸುವ ಜೀವಗಳು ಈ ಪ್ರಪ೦ಚದಲ್ಲಿ ಅದೆಷ್ಟೋ ಇವೆ. ನನ್ನ ಅಣ್ಣ ರವಿಶ೦ಕರ "ನಮಗೆ ದೊರಕಿರುವ ಸೌಲಭ್ಯಗಳ ಅರಿವು ತಕ್ಷಣವೆ ಆಗುವ೦ತೆ ಕೆಲವು ಛಾಯಾ ಚಿತ್ರ ಕಳುಹಿಸಿದ್ದಾನೆ. ಅದನ್ನು ನೋಡಿ ನಿಮಗೆ ದೊರಕಿರುವ ಕೊಡುಗೆಗಳ ಬಗ್ಗೆ ಯೋಚಿಸಿ. ನ೦ತರ ನನಗೆ ಪ್ರತಿಕ್ರಿಯಿಸಿ.
Image
ಯಾವುದೋ ಗು೦ಗಿನಲ್ಲಿರುವಾಗ ಕ೦ಡು ಬರುವ ಕೆಲವು ದೃಶ್ಯಗಳು ತುಟಿಯ ಅ೦ಚಿನಲ್ಲಿ ಮ೦ದ ಹಾಸ ಮಿನುಗಿಸುತ್ತವೆ. ಗೆಳತಿ ಆಶಾ ಕಳುಹಿಸಿದ ಕೆಲವು ಭಾವ ಚಿತ್ರಗಳು ನನ್ನನ್ನು ಖುಷಿ ಪಡಿಸಿದ್ದ೦ತೂ ನಿಜ. ನೀವೂ ಖುಷಿ ಪಡಿ ಎ೦ದು ಅವುಗಳನ್ನು ಪ್ರಕಟಿಸುತ್ತಿದ್ದೇನೆ.
Image
ವ್ಯ೦ಗ್ಯ ಚಿತ್ರಗಳು ಸಿಡುಕು ಮುಖದವನನ್ನೂ ಒಮ್ಮೆ ನಗಿಸದೇ ಇರದು. ಅದೆಷ್ಟೋ ವ್ಯ೦ಗ್ಯ ಚಿತ್ರಕಾರರು ನಗುವಿನ ಮೃಷ್ಟಾನ್ನ ನೀಡಿದ್ದಾರೆ. ಎಲ್ಲೋ ಹುಡುಕುತ್ತಿರುವಾಗ ನನ್ನ ಮನವನ್ನು ಆಕರ್ಷಿಸಿದ ವ್ಯ೦ಗ್ಯ ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇನೆ. ನೋಡಿ ಆನ೦ದಿಸಿ. ಇವನು ನಾಯಕ... (1) ರಕ್ಷಣೆ...(2) ಪುಸ್ತಕ ಪ್ರೀತಿ...(3) ಮಾನವೀಯತೆ...(4) ಜನಸ೦ಖ್ಯೆ...(5)