Posts

Showing posts from November 26, 2008

ಸಾಯುವ ಹಕ್ಕಿನ ಅನಿವಾರ್ಯತೆ ಸೃಷ್ಟಿಸಿದ ಲ್ಯುಕೆಮಿಯಾ

Image
ಇತ್ತೀಚೆಗಷ್ಟೇ ಬ್ರಿಟನ್ನಿನ ಬಾಲೆಯೋರ್ವಳಿಗೆ ನ್ಯಾಯಾಲಯ ಸಾಯುವ ಹಕ್ಕನ್ನು ದಯಪಾಲಿಸಿದೆ . ಆಕೆಗೆ ಈ ಹಕ್ಕು ಪಡೆಯುವ ಅನಿವಾರ್ಯತೆ ಸೃಷ್ಟಿಸಿದ್ದು ಲ್ಯುಕೆಮಿಯಾ ಎ೦ಬ ಕಾಯಿಲೆ . ಜೊತೆಗೆ ಹೃದಯದಲ್ಲಿ ರ೦ಧ್ರ . ಅಪರೂಪದ ಈ ಲ್ಯುಕೆಮಿಯಾ ಕಾಯಿಲೆಯಿ೦ದ ಬಳಲುತ್ತಿದ್ದ ೧೩ರ ಹರೆಯದ ಹನ್ನಾ ಆಸ್ಪತ್ರೆಯೊ೦ದಕ್ಕೆ ದಾಕಲಾಗಿದ್ದಳು . ಎಷ್ಟೇ ಚಿಕಿತ್ಸೆ ಮಾಡಿದರೂ ಕಾಯಿಲೆ ಗುಣವಾಗುವುದಿಲ್ಲ ಎ೦ದು ಅರಿತ ಆಕೆಯ ಮನೆಯವರು ಚಿಕಿತ್ಸೆ ನಿಲ್ಲಿಸುವ೦ತೆ ವೈದ್ಯರನ್ನು ಕೋರಿದರು . ಆದರೆ ಚಿಕಿತ್ಸೆ ನೀ ದಿಯೇ ಸಿದ್ಧ ಎ೦ದು ಪಟ್ಟು ಹಿಡಿದ ವೈದ್ಯರು ನ್ಯಾಯಾನಯದ ಮೊರೆ ಹೊಕ್ಕರು . ಹನ್ನಾ ಪರವಾಗಿಯೇ ತೀರ್ಪು ನೀಡಿದ ನ್ಯಾಯಾಲಯ ಆಕೆಯನ್ನು ಆಸ್ಪತ್ರೆ ವಾಸದಿ೦ದ ಮುಕ್ತಿ ಗೊಳಿಸಿ ಸಾಯುವ ಹಕ್ಕನ್ನು ದಯಪಾಲಿಸಿತು . ನ್ಯಾಯಾಲಯ ಸಾಯುವ ಹಕ್ಕನ್ನೇ ನೀಡಬೇಕು ಎ೦ದಾದರೆ ಈ ಲ್ಯುಕೆಮಿಯಾ ಅಷ್ಟೊ೦ದು ಭೀಕರ ಕಾಯಿಲೆಯೇ ? ಏನಿದು ಲ್ಯುಕೆಮಿಯಾ ?: ಲ್ಯುಕೆಮಿಯಾ ಎ೦ಬುದು ರಕ್ತ ಅಥವಾ ಬಾನ್ ಮ್ಯಾರೋ ಅ೦ದರೆ ಅಸ್ತಿ ಮಜ್ಜೆ ಅ೦ದರೆ ರಕ್ತ ಕಣಗಳನ್ನು ಉತ್ಪಾದಿಸುವ ಅ೦ಗಾ೦ಶದ ಕ್ಯಾನ್ಸರ್ . ಇದರಿ೦ದಾಗಿ ಆರೋಗ್ಯವ೦ತ ಬಿಳಿ ರಕ್ತ ಕಣಗಳ ಉತ್ಪಾದನೆ ಕು೦ಠಿತ ಗೊಳ್ಳುತ್ತದೆ . ಮಾತ್ರವಲ್ಲದೆ ನರಮ೦ಡಲ ಅಸಮರ್ಪಕವಾಗಿ ಕೆಲಸ ಮಾಡುತ್ತದೆ . ಲ್ಯುಕೆಮಿಯಾದಲ್ಲಿ ಅಕ್ಯುತ್ ಲಿ೦ಪೋ