Posts

Showing posts from June 16, 2011

'ಮಂಗಳನಲ್ಲಿ ಗಾಂಧಿ ಚಿತ್ರ'ದ ಜಾಡು ಹಿಡಿದು

Image
ಮಂಗಳಗ್ರಹದಲ್ಲಿ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮುಖದ ಚಿತ್ರ ಕಂಡಿದೆಯಂತೆ! ಹೀಗೊಂದು ಸುದ್ದಿ ಜೂನ್ 13ರಂದು ವೈಜ್ಞಾನಿಕ ವಲಯದಿಂದ ಪುಟಿದು ಬಂತು. ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಗೂ ಮಂಗಳಗ್ರಹಕ್ಕೂ ಎತ್ತಣಿಂದೆತ್ತ ಸಂಬಂಧ? ಸಂಶೋಧನೆಯ ಇನ್ನೂ ಒಂದು ಅಂಶ ಹೇಳುವ ಪ್ರಕಾರ ಈ ಚಿತ್ರವನ್ನು 'ಮಾನವರೇ' (?) ಕೆತ್ತಿದ್ದಾರೆ. ಯಾವ ರೀತಿ ನಾವು ಶಿಲೆಯಲ್ಲಿ ಕಲೆಯನ್ನು ಕೆತ್ತುತ್ತೇವೆಯೋ ಅಂಥದ್ದೇ ಒಂದು ಚಿತ್ರಣ ಇದು. ಈ ಚಿತ್ರ ಮಾತ್ರ ಖಡಾಖಂಡಿತವಾಗಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನೇ ಹೋಲುತ್ತದೆ. ಯೂರೋಪಿನ ಮಾರ್ಸ್ ಎಕ್ಸ್ ಪ್ರೆಸ್ ಶೋಧನೌಕೆ ತೆಗೆದಂಥ ಮಂಗಳಗ್ರಹದ ಚಿತ್ರಗಳನ್ನು ಅಧ್ಯಯನ ಮಾಡಿದ ಇಟಲಿಯ ಬಾಹ್ಯಾಕಾಶ ಸಂಶೋಧಕ ಮಟ್ಟೆವೋ ಲಾನೆವೋ 'ಮಗಳನಲ್ಲಿ ಕಾಣುತ್ತಿರುವುದು ಗಾಂಧೀಜಿಯ ಚಿತ್ರ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಮೀಸೆ, ದಟ್ಟ ಹುಬ್ಬುಗಳುಳ್ಳ, ಪೂರ್ಣ ಬಕ್ಕತಲೆಯ ಈ ಚಿತ್ರವು ಸ್ಪಷ್ಟವಾಗಿ ಗಾಂಧೀಜಿಯನ್ನು ಹೋಲುತ್ತದೆ' ಎಂದು ಹೇಳುತ್ತಾರೆ. ವಾದ ಏನೇ ಇರಲಿ! ಅಲ್ಲಿ ಕಾಣುತ್ತಿರುವುದು ಗಾಂಧೀಜಿಯ ಚಿತ್ರವೇ ಆಗಲಿ, ಬೇರೆ ಯಾರದ್ದೇ ಆಗಲಿ. ಮಂಗಳಗ್ರಹದಲ್ಲಿ ಕಂಡದ್ದೆಂದು ಹೇಳಿಕೊಳ್ಳುತ್ತಿರುವ ಚಿತ್ರವೊಂದು ವೈಜ್ಞಾನಿಕ ವಲಯದಲ್ಲಿ ಭಾರೀ ಅಚ್ಚರಿಯ ಅಲೆಗಳನ್ನು ಹುಟ್ಟಿಸಿದ್ದು, ವಿಜ್ಞಾನಿಗಳಲ್ಲಿ ಮಂಗಳನ ಸಂಶೋಧನೆಯ ಬಗ್ಗೆ ಇನ್ನಷ್ಟು ಪ್ರೇರೇಪಣೆ ನೀಡಿದ್ದಂತೂ ನಿಜ. ಆದರೂ ಇಲ್ಲೊಂದು ಅನುಮ