Posts

Showing posts from July 14, 2011

ಉದ್ದೇಶವೊಂದೇ ಸಾಲದು, ಸಾಧನೆಯೂ ಜೊತೆಗೂಡಬೇಕು

Image
ಸರಿಯಾಗಿ ಒಂದು ವರ್ಷವಾಗಿತ್ತು ಚೀನಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಕಡಿತಗೊಂಡು. ಈ ಸಂಬಂಧವನ್ನು ಮತ್ತೆ ಸುಧಾರಿಸಿಕೊಳ್ಳಬೇಕು, ಎರಡೂ ದೇಶಗಳ ನಡುವೆ ಮತ್ತೆ ಉತ್ತಮ ಸಂಬಂಧ ಬೆಸೆದುಕೊಳ್ಳಬೇಕು ಎಂಬ ಪ್ರಯತ್ನಗಳು ಸತತವಾಗಿ ನಡೆದಿದ್ದವು. ಇದು ಸಕಾರಕ್ಕೆ ಬರುವ ಪ್ರಯತ್ನ ನಡೆದದ್ದು ಭಾರತೀಯ ರಕ್ಷಣಾ ಇಲಾಖೆಯಿಂದ. ಕೆಲವು ದಿನಗಳ ಹಿಂದೆ ಮೇಜರ್ ಜನರಲ್ ಗುರ್ ಮೀತ್ ಸಿಂಗ್ ನೇತೃತ್ವದ ರಕ್ಷಣಾ ಇಲಾಖೆಯ ಎಂಟು ಮಂದಿ ಸದಸ್ಯರನ್ನೊಳಗೊಂಡ ನಿಯೋಗವು ಚೀನಾಕ್ಕೆ ತೆರಳಿತ್ತು. ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಳ್ಳುವುದು ಈ ಭೇಟಿಯ ಉದ್ದೇಶ. ಸತತ ಒಂದು ವಾರದ ಮಾತುಕತೆ. ಚೀನಾದ ವಿವಿಧ ನಗರಗಳಿಗೆ ಭೇಟಿ ಕೊಟ್ಟು ಅಲ್ಲಿನ ಅಭಿವೃದ್ಧಿ ಮತ್ತು ಮಿಲಿಟರಿ ವಿಚಾರಗಳನ್ನು ಅಧ್ಯಯನ ಮಾಡಿತು. ಚೀನಾದ ಮಿಲಿಟರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ಅಷ್ಟೇ ಸಾಕೆ? ಫಲ ಬೇಡವೇ? ಚೀನಾ ಭೇಟಿ ಫಲಪ್ರದವಾಗಿದೆ ಎಂದು ಚೀನಾದಿಂದ ವಾಪಸಾದ ಭಾರತೀಯ ನಿಯೋಗವೇನೋ ಹೇಳಿತ್ತು. ಆದರೆ ಸಂಪೂರ್ಣ ಮಾಹಿತಿಯನ್ನು, ಒಪ್ಪಂದದ ವಿವರಗಳನ್ನು ಕೊಟ್ಟಿರಲಿಲ್ಲ. ಜೂನ್ 29ರಂದು ಇದಕ್ಕೆ ತೆರೆ ಎಳೆಯುವಂತೆ ಚೀನಾ 'ಮಿಲಿಟರಿ ಒಪ್ಪಂದದ ಬಗ್ಗೆ ಮಾತುಕತೆಗಳು ನಡೆದದ್ದೇನೋ ನಿಜ. ಆದರೆ ಒಪ್ಪಂದ ಪೂರ್ಣಗೊಳ್ಳಲು ಎರಡೂ ಕಡೆಯಿಂದ ಹಲವಾರು ಅಡೆತಡೆಗಳಿವೆ. ಸಮಸ್ಯೆಗಳಿವೆ' ಎಂದಿತು. ಎರಡೂ ದೇಶಗಳು ಜೊತೆಗೂಡಿ ಕೆಲಸ ಮಾಡುವ ಮನಸ್ಥಿತಿಯನ್ನು ಪ್ರದರ್ಶಿಸಿದವು ನಿಜ. ಆದರೆ ಹ