Posts

Showing posts from June 3, 2011

ಈ 'ಹೋರಾಟ'ದ ಯಾನ ನಮಗೆಂದು ಸಾಧ್ಯ?

Image
Endeavour- ಅಂದರೆ ಹೋರಾಟ, ಪ್ರಯತ್ನ. ಬಾಹ್ಯಾಕಾಶದಲ್ಲಿ ಮಾನವ ಕಾಲಿಟ್ಟು, ಅಲ್ಲಿಂದ ವಿಸ್ಮಯಗಳ ಆಗರವನ್ನೇ ಬಗೆದು ನೋಡುವಂಥ ಕಲ್ಪನೆಯನ್ನು ಸಾಕಾರಗೊಳಿಸಿಕೊಳ್ಳುವ ಕನಸು ಕಂಡ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಪಾಲಿಗೆ ಅದು ನಿಜವಾದ 'ಹೋರಾಟ'ವೇ ಸರಿ. ಬಾಹ್ಯಾಕಾಶದಲ್ಲೊಂದು ನಿಲ್ದಾಣ ಸ್ಥಾಪನೆ ಮಾಡಬೇಕು, ಆ ನಿಲ್ದಾಣವನ್ನು ಅಭಿವೃದ್ಧಿಗೊಳಿಸಬೇಕು, ಬಾಹ್ಯಾಕಾಶ ಯಾತ್ರೆ ಹೊರಟಂಥ ಮಾನವ ಭೂಮಿಯಿಂದ ಒಮ್ಮಿಂದೊಮ್ಮೆಗೇ ತಲುಪಲು ಸಾಧ್ಯವಾಗದಂತಹ ಸ್ಥಳಗಳನ್ನು ತಲುಪುವುದಕ್ಕೆ ಈ ನಿಲ್ದಾಣ ನೆರವಾಗಬೇಕು, ಒಂದೊಮ್ಮೆ ಅನಿವಾರ್ಯವಾಗಿ ಗಗನನೌಕೆಗೆ ಸ್ವಲ್ಪ ವಿಶ್ರಾಂತಿ ಕೊಡಬೇಕೆಂಬ ಪರಿಸ್ಥಿತಿ ಬಂದರೂ ಇಳಿದುಕೊಳ್ಳುವುದಕ್ಕೊಂದು ನೆಲೆಯಿರಬೇಕು. ಈ ಎಲ್ಲ ಕನಸುಗಳನ್ನು ನನಸಾಗಿಸುವ ಹೋರಾಟಕ್ಕೆ ಅಣಿಯಾದಂತಹ ನಾಸಾ ಅದನ್ನು ಸಾಧಿಸಿ ತೋರಿಸಿತು. ಈ ಬಾಹ್ಯಾಕಾಶ ನಿಲ್ದಾಣವನ್ನು ಕಟ್ಟುವುದೇ ಒಂದು ಹೋರಾಟವಾಗಿತ್ತು. ಅಂಥ ಹೋರಾಟ ಯಶಸ್ವಿಯಾಗಬೇಕು ಎಂದಾದರೆ ಭೂಮಿ ಮತ್ತು ಬಾಹ್ಯಾಕಾಶದ ನಡುವಿನ ನಂಟು ಗಟ್ಟಿಯಾಗಿರಬೇಕು. ಆ ಬಂಧಕ್ಕೆ ತಡೆಯಿರಕೂಡದು. ಅಂಥದ್ದೊಂದು ಬಂಧವನ್ನು ಬೆಸುಗೆ ಹಾಕಿದ್ದು ನಾಸಾದ ಗಗನನೌಕೆ Endeavour. ಇಷ್ಟೆಲ್ಲ ಮನಃಪಟಲದಲ್ಲಿ ಹಾದು ಹೋದದ್ದು ಮೊನ್ನೆ ಜೂನ್ 1ರಂದು ಈ ಎಂಡೆವರ್ ತನ್ನ ಅಭಿಯಾನವನ್ನು ಕೊನೆಗೊಳಿಸಿದಾಗ! ಬಾಹ್ಯಾಕಾಶ ಕ್ಷೇತ್ರದಲ್ಲಿ ವಿವಿಧ ಸಾಧನೆಗಳನ್ನು ಮಾಡುವ ಕನಸು ಕಟ್ಟುತ್ತಿರುವ ಹಲವಾರು ಮನಸ್ಸುಗಳು ಭಾರತ