Posts

Showing posts from June 25, 2011

ಪರಿವರ್ತನೆಯ ಹಾದಿಯಲ್ಲಿ ಮುಸ್ಲಿಮ್ ಮಹಿಳೆ

ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವೇ ಸುಶಿಕ್ಷಿತವಾದಂತೆ. ಒಬ್ಬ ಮಹಿಳೆಗೆ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದರೆ ಒಂದು ಕುಟುಂಬವೇ ಹಕ್ಕುಗಳ ಬಗ್ಗೆ ಜಾಗೃತಗೊಂಡಂತೆ! ಈ ಮಾತು ಹೇಳಬೇಕೆನ್ನಿಸಿದ್ದು ಭಾರತೀಯ ಮುಸ್ಲಿಮ್ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುತ್ತಿರುವ ಮಹತ್ವದ ಬೆಳವಣಿಗೆಯನ್ನು ಗಮನಿಸಿದಾಗ. ಆಕೆ ನಾಝಿಯಾ ನಿಜಾಮಿ. ಗಂಡನೊಂದಿಗೆ ಸಂಸಾರ ಸರಿಹೋಗಲಿಲ್ಲ. ಪ್ರತಿದಿನ ಕಿರುಕುಳ ಕೊಡುತ್ತಿದ್ದ ಗಂಡನೊಂದಿಗೆ ಬದುಕು ಹಂಚಿಕೊಳ್ಳುವುದು, ತನಗಾಗುತ್ತಿರುವ ನೋವನ್ನು ಸಹಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸಾಧ್ಯ? ತಾಳ್ಮೆ, ಸಹನೆಯ ಕಟ್ಟೆಯೊಡೆದಾಗ ಒಳಗಿನ ನೋವು, ದುಃಖ, ಹತಾಶೆ ಹೊರಗೆ ಧುಮ್ಮಿಕ್ಕಲೇಬೇಕು, ಸಿಡಿವ ಅಗ್ನಿಪರ್ವತದಂತೆ. ನಿಜಾಮಿಯ 'ಸಹನಾಕಟ್ಟೆ'ಯೂ ಸಿಡಿಯಿತು. ಸಂಸಾರದ ಕೊಂಡಿ ತಪ್ಪಿತು. ಗಂಡ ಎನ್ನಿಸಿಕೊಂಡ ಸಯ್ಯದ್ ನದೀಮ್ 'ತಲಾಖ್' ಎಂದ. ನಿಜಾಮಿ ಬಿಡಲಿಲ್ಲ, ಜೀವನಾಂಶ ಕೇಳಿದಳು. 'ಕೊಡಕ್ಕಾಗಲ್ಲ' ಎಂದ ಸಯ್ಯದ್ ನನ್ನು ಸುಮ್ಮನೇ ಬಿಟ್ಟರೆ ತನ್ನ ಹಕ್ಕು ಕಳಕೊಂಡಂತೆ ಎಂಬ ಸತ್ಯವನ್ನು ಅರಿತುಕೊಂಡಿರುವ ನಿಜಾಮಿ ನ್ಯಾಯಾಲಯದ ಕಟಕಟೆ ಏರಿದಳು. ಕೆಳಹಂತದ ನ್ಯಾಯಾಲಯ ಆಕೆಯ ಪರವಾಗಿಯೇ ತೀರ್ಪು ನೀಡಿ, ಮಾಸಿಕ 8,000 ರು. ಜೀವನಾಂಶ ನೀಡುವಂತೆ ಸಯ್ಯದ್ ನದೀಮ್ ಗೆ ಆದೇಶ ನೀಡಿತು. ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಸಯ್ಯದ್. 'ಆಕೆಗೆ ಜೀವನಾಂಶ ಕ