Posts

Showing posts from October 16, 2011

ಜನಪ್ರಿಯತೆಯ ಅಲೆಯಲ್ಲಿ ಕೊಚ್ಚಿ ಹೋಗುತ್ತಿದೆ ವೃತ್ತಿಪರತೆ!

Image
'ಪ್ರತಿಯೊಂದು ಪಂದ್ಯವನ್ನೂ ಆಡ್ಬೇಕು, ಪ್ರತಿಯೊಂದನ್ನೂ ಗೆಲ್ಲಬೇಕು'! ಕ್ರಿಕೆಟ್ ಬಗ್ಗೆ ಭಾರತೀಯ ಪ್ರೇಕ್ಷಕನ ನಿರೀಕ್ಷೆಯಿದು. ಹಲವು ದಶಕಗಳಿಂದ ಭಾರತೀಯ ಜೀವನದ ಅವಿಭಾಜ್ಯ ಅಂಗವೋ ಎಂಬಷ್ಟು ಮಾನ್ಯತೆ ಪಡೆದಿರುವಂಥ ಕ್ರಿಕೆಟ್ ನಿಂದ ಈ ಮಟ್ಟದ ನಿರೀಕ್ಷೆ ಮಾಡಿದಲ್ಲಿ ತಪ್ಪೇನು ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಬಹುದು. ಭಾರತೀಯ ಕ್ರಿಕೆಟ್ ತಂಡ ಹೆಚ್ಚು ಸಮರ್ಥ ಫಲತಾಂಶ ನೀಡಲು ಯಶಸ್ವಿಯಾಗದೇ ಇರುವುದಕ್ಕೆ ವೇಳಾಪಟ್ಟಿಯೇ ಕಾರಣ ಎಂಬುದು ಖಂಡಿತ. ಇತ್ತೀಚೆಗಿನ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಂದು ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಗಳನ್ನು ಆಡಿತು. ಅದಾದ ಕೆಲವೇ ದಿನಗಳಲ್ಲಿ ಶುರುವಾಯಿತು ಛಾಂಪಿಯನ್ಸ್ ಲೀಗ್. ಈ ಲೀಗ್ ಮುಗಿಯುವುದೇ ತಡ ಮತ್ತೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿ! ಈ ಸರಣಿಗಳ ನಡುವೆ ಬಿಡುವೆಲ್ಲಿದೆ ಸ್ವಾಮಿ? ಬಿಡುವಿಲ್ಲದ ದಿನಚರಿಯ ಹಿನ್ನೆಲೆಯಲ್ಲಿ ಜನರು ಟಿ20 ಪಂದ್ಯಗಳನ್ನು ಇಷ್ಟಪಡುತ್ತಾರೆ ನಿಜ. ಇಂದು ಟಿ20 ಪಂದ್ಯಗಳೇ ಹೆಚ್ಚಾಗಿವೆ ಎಂದರೆ ಅದಕ್ಕೆ ಮುಖ್ಯವಾದ ಕಾರಣ ಅದರಿಂದ ಬರುವ ಹಣ! ಟಿ20 ಪಂದ್ಯಗಳ ಆಯೋಜನೆಯಿಂದ ಎಷ್ಟು ಹಣ ಬರಬಹುದು ಎಂಬ ಆಲೋಚನೆ ಬಿಸಿಸಿಐ ಮನಸ್ಸಿನಲ್ಲಿದ್ದರೆ, ಇವುಗಳಿಂದ ತಾವೆಷ್ಟು ಹಣ ಸಂಪಾದನೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ ಆಟಗಾರರು. ಟಿ20 ಪಂದ್ಯಗಳಿಂದ ಹಣ ಬರುತ್ತೆ, ಅಂತಾರಾಷ್ಟ್ರೀಯ ಪಂದ್ಯಗ