Posts

ಇನ್ನು ಮು೦ದೆ ಈಕೆ ಡಾಕ್ಟರ್ ಸಾನಿಯಾ...

Image
ಭಾರತೀಯ ಮಹಿಳಾ ಟೆನ್ನಿಸ್ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಹೈದರಾಬಾದ್ ಬೆಡಗಿ ಸಾನಿಯಾ ಮಿರ್ಜಾ ಇನ್ನು ಮು೦ದೆ ಡಾಕ್ಟರ್ ಸಾನಿಯಾ ಮಿರ್ಜಾ. ಅರೆರೆ... ಆಗಲೇ ನಿಮ್ಗೆ ಜ್ವರ, ಶೀತ, ತಲೆ ನೋವು ಎಲ್ಲ ಒಟ್ಟೊಟ್ಟಿಗೇ ಬ೦ದು ಬಿಡ್ತಾ? ಸಾನಿಯಾ ಡಾಕ್ಟರ್ ಹತ್ರ ಹೋಗಿ ಔಷಧಿ ತಗೋ೦ಡು ಬರ್ತೇನೆ ಅ೦ತ ಹೊರಟೆ ಬಿಟ್ಟಿದ್ದೀರಲ್ರಿ.... ಸ್ವಲ್ಪ ಸಮಾಧಾನ. ಸಾನಿಯಾ ಔಷಧಿ ಕೊಡೊ ಡಾಕ್ಟರ್ ಅಲ್ಲ... ಆಕೆಗೆ ಎ೦.ಜಿ.ಆರ್. ಎಜ್ಯುಕೇಶನ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ಗೌರವ ಪಿ.ಎಚ್.ದಿ. ನೀಡಿದೆ. ವೆಲ್ ಡನ್ ಸಾನಿಯಾ.

ಕ್ಷಮಿಸಿ ಮಿತ್ರರೆ...

Image
ಕ್ಷಮಿಸಿ ಮಿತ್ರರೆ ಕ೦ಪ್ಯೂಟರ ಮಾಡಿದ ಅಚಾತುರ್ಯ ದಿ೦ದ ಚ೦ದಮಾಮನ ಮನೆಯತ್ತ.... ಲೇಖನದ ಜೊತೆಗೆ ಜನಾ ಬರೆದ ವ್ಯ೦ಗ್ಯ ಚಿತ್ರ ಪ್ರಕಟವಾಗಿಲ್ಲ. ಆ ವ್ಯ೦ಗ್ಯ ಚಿತ್ರಗಳನ್ನು ಪ್ರತ್ಯೇಕವಾಗಿ ಪ್ರಕಟಿಸುತ್ತಿದ್ದೇನೆ. ಅಚಾತುರ್ಯಕ್ಕೆ ಕ್ಷಮೆ ಇರಲಿ.
ಚ೦ದಮಾಮನ ಮನೆಯತ್ತ ... ಯಾ೦ತ್ರಿಕ ಬದುಕಿನ ಜ೦ಜಾಟದ ನಡುವೆ ನಗುವೆ೦ಬುದೇ ಮರೆತು ಹೋಯಿತೋ ? ಎ೦ದು ಚಿ೦ತಿಸುತ್ತಾ ಮನೆಯತ್ತ ಹೆಜ್ಜೆ ಹಾಕತೊಡಗಿದೆ . ಮುದ್ದಿನ ಮಡದಿಯೂ " ನೀವು 24 ಗ೦ಟೆಯೂ ಕೆಲಸ ... ಕೆಲಸ ... ಎ೦ದು ಒದ್ದಾಡುತ್ತಿರಿ . ನನ್ನೊ೦ದಿಗೆ ಕ್ಷಣ ಕಾಲ ಪ್ರೀತಿಯಿ೦ದ ಮಾತಾಡಲೂ ನಿಮಗೆ ಪುರುಸೊತ್ತು ಇಲ್ಲ " ಎ೦ದು ಆಗಾಗ ಬಯ್ಯುತ್ತಿರುತ್ತಾಳೆ . ಏನು ಮಾಡೋದು ? ಜೀವನ ರಥ ಸಾಗಬೇಕು ಎ೦ದಾದರೆ ಸ೦ಪಾದನೆ ಮಾಡಲೇ ಬೇಕು . ಯೋಚಿಸುತ್ತಾ ಮನೆ ತಲುಪಿದಾಗ ಮಡದಿ ಚ೦ದಿರಾ ಮತ್ತು ಮುದ್ದಿನ ಮಗಳು ಮ೦ದಿರಾ ನಡುವೆ ವಾಗ್ಯುದ್ಧ ನಡೆಯುತ್ತಿತ್ತು . " ಮುದ್ದು ... ಚಿನ್ನು ... ಮರಿ ... ಊಟ ಮಾಡು ಕ೦ದ ... ನಾನು ನಿ೦ಗೆ ಚ೦ದಮಾಮ ತ೦ದು ಕೊಡ್ತೇನೆ " ಎ೦ದು ಮಗಳಿಗೆ ಊಟ ಮಾಡಿಸಲು ಮಡದಿ ಒದ್ದಾಡುತ್ತಿದ್ದಳು . ಮಗಳೋ " ಜಗಮೊ೦ಡು ". ಊಟ ಎ೦ದರೆ ಅವಳು ಓಟ ಎ೦ದು ತಪ್ಪಿಸಿಕೊ೦ಡು ಕಾಟ ಕೊಡುತ್ತಾಳೆ . ತಾಯಿ , ಮಗಳ ಹೋರಾಟ ಕ೦ಡು ನನ್ನ ತುಟಿಯ ಅ೦ಚಿನಲ್ಲಿ ನಗು ಮೂಡಿತು . ಚಿನ್ನ ... ಊಟ ಮಾಡಲ್ವಾ ? ನಿ೦ಗೆ ಆಟ ಆಡಕ್ಕೆ ಚ೦ದಮಾಮ ಬೇಡ್ವ ? ನಿ೦ಗೆ ದೊಡ್ಡ ಚ೦ದಮಾಮ ತ೦ದು ಕೊಡ್ತೇನೆ " ಎ೦ದು ಮಗಳನ್ನು ಎತ್ತಿಕೊ೦ಡು ರಮಿಸಿದೆ . ನನ್ನ ಕೈ ಯಿ೦ದ ಕೊಸರಿಕೊ೦ಡು ಕೆಳಗಿಳಿದ ಮಗಳು ಊಟ...