Posts

ವಿತ್ತ ಕೊರತೆಯಿದ್ದರೆ ವೆಚ್ಚಕ್ಕೆ ಕಡಿವಾಣ ಹಾಕಿ!

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ.5.6ರಷ್ಟು ವಿತ್ತೀಯ ಕೊರತೆ ಎದುರಾಗಲಿದೆ ಅಂದಿದ್ದಾರೆ ಪ್ರಧಾನಮಂತ್ರಿಯ ಆರ್ಥಿಕ ಸಲಹೆಗಾರ ಎಂ.ಗೋವಿಂದ ರಾವ್. ಅಂದರೆ ಕೇಂದ್ರ ಸರ್ಕಾರದ ಬಜೆಟಿನ ಶೇ.1ರಷ್ಟು ಹೆಚ್ಚು ಆರ್ಥಿಕ ಕೊರತೆಯನ್ನು ನಾವು ಎದುರಿಸಬೇಕಾಗುತ್ತದೆ. ಭಾರತ ಇಂದು ಆರ್ಥಿಕ ಕೊರತೆಯ ಸಂಕಷ್ಟದ ಸುಳಿಯಲ್ಲಿ ನಲುಗುತ್ತಿರುವುದು ಏಕೆಂದು ಚಿಂತಿಸುತ್ತಾ ಹೋದರೆ ಕಾರಣಗಳ ನೂರಾರು ಪುಟಗಳು ತೆರದುಕೊಳ್ಳುತ್ತವೆ. ಮೂಗಿಗಿಂತ ಮೂಗುತಿ ಭಾರ ಎಂಬ ಗಾದೆ ಮಾತು ನಮ್ಮ ವಿತ್ತೀಯ ಕೊರತೆಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ. ಅದು ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರಗಳೇ ಇರಲಿ, ಬಜೆಟ್ ಮಂಡಿಸುವ ಸಂದರ್ಭದಲ್ಲಿ ಅವರ ಕಣ್ಣ ಮುಂದಿರುವುದು ಓಲೈಕೆ ರಾಜಕಾರಣ. ಯಾವ ಮತದಾರನನ್ನು ಹೇಗೆ ಓಲೈಸುವುದು ಎಂಬ ಲೆಕ್ಕಾಚಾರದಲ್ಲೇ ನಮ್ಮ ವಿತ್ತ ಮಂತ್ರಿಗಳು ಬಜೆಟ್ ಸಿದ್ಧಪಡಿಸಿದರೆ ಸಿದ್ಧಗೊಳ್ಳುವ ಬಜೆಟಿನ ಗಾತ್ರ ಹಿರಿದಾಗುತ್ತಾ ಹೋಗುತ್ತದೆಯೇ ಹೊರತು ಕಿರಿದಾಗುವುದಿಲ್ಲ. ಪ್ರತಿಯೊಂದು ಸರ್ಕಾರವೂ ತನ್ನ ಮೊದಲಿನ ಸರ್ಕಾರಕ್ಕಿಂತ ದೊಡ್ಡ ಬಜೆಟ್ ಮಂಡಿಸಿದ ಕೀರ್ತಿಯನ್ನು ಪಡೆಯಬೇಕು ಎಂಬ ಭ್ರಮಾಸಾಗರದಲ್ಲಿ ತೇಲಾಡುತ್ತಿರುವುದು ಕೂಡಾ ಬಜೆಟಿನ ಗಾತ್ರ ಹಿರಿದಾಗುವುದಕ್ಕೆ ಕಾರಣವಾಗಿದೆ. ಬಜೆಟ್ ಹಿರಿದಾರೆ ಸಮಸ್ಯೆಯೇನು? ವಿವಿಧ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದಾದರೆ ದೊಡ್ಡ ಬಜೆಟ್ ಬೇಕಲ್ಲವೇ? ಎಂಬೆಲ್ಲ ಪ್ರಶ್ನೆಗಳು ಕಾಡಬ...

ಮುತ್ತಿಗೆ ನಮಗೂ ಬೇಕೆ?: ಮುಂಬೈಗೆ ಬಂತು 'ಆಕ್ಯುಪೈ ವಾಲ್ ಸ್ಟ್ರೀಟ್' ಪ್ರತಿಭಟನೆ

'ಅಮೆರಿಕದ ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಕ್ಕೆ ಹಲವಾರು ಕಾರಣಗಳಿವೆ. ಸಾಮಾನ್ಯ ಜನರಿಗೆ ವೆಚ್ಚ ಕಡಿತ ಮಾಡುವುದಕ್ಕೆ ಹೇಳಿರುವಂಥ ಸಂದರ್ಭದಲ್ಲಿ ಬ್ಯಾಂಕರ್ ಗಳಿಗೆ, ಕಾರ್ಪೊರೇಟ್ ಗಳಿಗೆ ಲಕ್ಷಾಂತರ ಡಾಲರ್ ನೆರವು ಸಿಗುತ್ತಿರುವ ಕಾರಣದಿಂದಾಗಿ ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುವ ಭೀತಿಯಿದೆ. ಐರೋಪ್ಯ ರಾಷ್ಟ್ರಗಳಲ್ಲಿಯೂ ಇದೇ ಆತಂಕವಿದೆ. ಈ ಪ್ರತಿಭಟನೆ ನಿಲ್ಲಬೇಕು ಮತ್ತು ಸಮಸ್ಯೆ ನಿವಾರಣೆಯಾಗಬೇಕು ಎಂದಾದರೆ ವಿಶ್ವಾಸಾರ್ಹವಾದ, ಸದೃಢವಾದ ವ್ಯವಸ್ಥೆಯೊಂದರ ಅಗತ್ಯವಿದೆ....' ಇದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಮೆರಿಕದಲ್ಲಿನ ಪ್ರತಿಭಟನೆಯ ಬಗ್ಗೆ ಕೊಟ್ಟಂಥ ಪ್ರತಿಕ್ರಿಯೆ. ಈ ಮಾತಿನಲ್ಲಿ ವಾಸ್ತವಾಂಶವಿದೆ  ಜೊತೆಗೆ ಒಂದು ರೀತಿಯ ನಿರ್ಲಕ್ಷ್ಯವಿದೆ. ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿದ್ದಾರೆ. ವಿವಿಧ ದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಪೊರೇಟ್ ಗಳ ಮೇಲೆ, ಅವುಗಳಿಗೆ ಪ್ರೋತ್ಸಾಹ ಕೊಡುತ್ತಿರುವಂಥ ಸರಕಾರಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಕ್ತ ಆರ್ಥಿಕತೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ನಿಜ, ಅಮೆರಿಕ, ಐರೋಪ್ಯ ರಾಷ್ಟ್ರಗಳಲ್ಲಿ ನಿರುದ್ಯೋಗದ ಭೀತಿಯಿದೆ. ಸಿಂಗ್ ಅವರ ಈ ಮಾತು ನಿಜ. ಆದರೆ ಭಾರತದ ದೃಷ್ಟಿಯಲ್ಲಿ ಅವರೇನೂ ಚಿಂತನೆ ನಡೆಸಿದಂತಿಲ್ಲ. ...

ಅಮರಿಕೊಂಡ ಅಮೆರಿಕ

ಮುಕ್ತ ಆರ್ಥಿಕತೆ ಜಗತ್ತಿನಲ್ಲಿ ಅಂಬೆಗಾಲಿಟ್ಟಾಗಲೇ ಅದರ ಬಗ್ಗೆ ವ್ಯಾಮೋಹ ಗಾಢವಾಗಿತ್ತು. ಈ ವ್ಯಾಮೋಹದ ಪರಿಣಾಮವೇ ಅದು ಏಕಾಏಕಿ ದೈತ್ಯಾಕಾರ ತಾಳಿ ಬೆಳೆಯುವಂತಾಯಿತು. ಇದೀಗ ಅದೇ ಮುಕ್ತತೆ ವಿರುದ್ಧ ಕೂಗು ಆರಂಭವಾಗಿದೆ. ವಾಲ್ ಸ್ಟ್ರೀಟ್ ಗೇ ಮುತ್ತಿಗೆ ಹಾಕುವಂಥ ಆಂದೋಲನಗಳು ವೇಗ ಪಡೆದುಕೊಳ್ಳುತ್ತಿವೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸುವ ಕೂಗು ಈ ಗುಂಪಿನಿಂದ ಕೇಳಿಸುತ್ತಿದೆ. ಈ ತಿಂಗಳಲ್ಲೇ ಅಮೆರಿಕದ ಸುಮಾರು 70 ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆದಿದೆ. ಹಾಗಿದ್ದರೆ ಮುಕ್ತ ಆರ್ಥಿಕತೆಯ ವಿರುದ್ಧ ಜನರು ಒಟ್ಟಾಗುತ್ತಿದ್ದಾರೆಯೇ? ಅದರಿಂದಾದಂಥ ಸಮಸ್ಯೆಗಳು ಏನು? ಕಾರ್ಪೊರೇಟ್ ವಲಯಗಳಿಂದ ಲಾಭ ಆಗಿಲ್ಲವೇ? ಹಿನ್ನೆಲೆ ಇಷ್ಟು: ಪ್ರಜಾಪ್ರಭುತ್ವದ ಮೇಲೆ ಕಾರ್ಪೊರೇಟ್ ವ್ಯವಸ್ಥೆ ಕೆಟ್ಟ ಪ್ರಭಾವ ಬೀರುತ್ತಿದೆ ಎಂದು ಅನಿಸತೊಡಗಿತು. ಇದರ ವಿರುದ್ಧ ಧ್ವನಿಯೆತ್ತಿದ್ದು ಕೆನಡಾ ಮೂಲದ ಅಡ್ ಬಸ್ಟರ್ಸ್ ಮೀಡಿಯಾ ಫೌಂಡೇಶನ್. ಪ್ರಜಾಪ್ರಭುತ್ವದ ಮೇಲಿನ ಕಾರ್ಪೊರೇಟ್ ಪ್ರಭಾವದ ವಿರುದ್ಧ ಹೋರಾಡುವುದಕ್ಕಾಗಿ ವಾಲ್ ಸ್ಟ್ರೀಟ್ ಗೆ ಶಾಂತಿಯುತವಾಗಿ ಮುತ್ತಿಗೆ ಹಾಕುವ ಪ್ರಸ್ತಾಪ ಮುಂದಿಟ್ಟಿತು. ಇದಕ್ಕೆ ವ್ಯಾಪಕ ಬೆಂಬಲ ಸಿಕ್ಕಿ ಇದೀಗ ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕುವ ಆಂದೋಲನಗಳು ನಡೆಯುತ್ತಿವೆ. 2008ರಲ್ಲಿ ಜಾಗತಿಕ ಆರ್ಥಿಕ ಮಹಾಪತನ ಎದುರಾದಾಗ ಒಂದು ಭರವಸೆ ಇತ್ತು. ಅದು- ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಗೆ ವಾಸ್ತವ ಸ...

ಉದ್ದೀಪನದ ಸುಳಿಯಲ್ಲಿ ಬೀಳುವುದು ಹೀಗೆ...

Image
ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳು ಹಲವಾರು ಪದಕಗಳನ್ನು ಗೆದ್ದಾಗ ದೇಶದ ಕ್ರೀಡಾ ವಲಯದಲ್ಲಿಯೇ ಸಂಭ್ರಮ. ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಹೊಸ ಭರವಸೆಗಳು ಹುಟ್ಟಿಕೊಂಡವು ಎಂಬ ಅದಮ್ಯ ವಿಶ್ವಾಸ. ಮುಂಬರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಅಮೋಘ ಸಾಧನೆ ಮಾಡುತ್ತದೆ ಎಂಬ ಕೋಟಿ ಭರವಸೆ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಈಗ ಬಂದಿರುವ ಫಲಿತಾಂಶ ಮಾತ್ರ ಇವೆಲ್ಲವನ್ನೂ ಸುಟ್ಟು ಹಾಕಿದೆ. ಅಶ್ವಿನಿ ಅಕ್ಕುಂಜಿ, ಮನ್ ದೀಪ್ ಕೌರ್, ಸಿನಿ ಜೋಸ್, ಜುವಾನಾ ಮರ್ಮು, ಟಿಯಾನಾ ಮೇರಿ ಥಾಮಸ್, ಸೋನಿಯಾ, ಹರಿಕೃಷ್ಛಮುರಳೀಧರನ್, ಪ್ರಿಯಾಂಕಾ ಪನ್ವಾರ್ ಮೊದಲಾದ ಅಥ್ಲೀಟ್ ಗಳುನಿಷೇಧಿತ ಅನಬಾಲಿಕ್ ಸ್ಟಿರಾಯಿಡ್ ಮಿಥಾಂಡಿನನ್ ಸೇವಿಸಿದ್ದು ಖಾತ್ರಿಯಾದ ಕಾರಣ ನಿಷೇಧಕ್ಕೊಳಗಾದರು. ಮೊನ್ನೆ ಮೊನ್ನೆಯಷ್ಟೇ 19 ಕಬಡ್ಡಿ ಆಟಗಾರರು ಬಿ ಸ್ಯಾಂಪಲ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ವಿಶ್ವ ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯ ಮೆರೆದಿದ್ದ ಭಾರತೀಯ ಕಬಡ್ಡಿ ತಂಡಕ್ಕೆ ಈಗ ಅಲ್ಲಿಯೂ ಕತ್ತಲೆ! ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಆಕಾಂಕ್ಷೆ ಇಟ್ಟುಕೊಂಡಿರುವಂಥ ಹಲವಾರು ಭಾರತೀ ಕ್ರೀಡಾಳುಗಳು ಉದ್ದೀಪನ ಮದ್ದು ಸೇವನೆಯ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ರಾಷ್ಟ್ರ ಮಟ್ಟದವರೆಗೂ ಯಾವುದೇ ಸಮಸ್ಯೆ ಎದುರಿಸದೇ ಇದ್ದವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಗಳ ಸರಣಿಯೇ ಎದುರಾಗುತ್ತದೆ. ತಾನು ಉದ್ದೀಪನ ಮದ್ದು ಸೇವಿ...

ಜನಪ್ರಿಯತೆಯ ಅಲೆಯಲ್ಲಿ ಕೊಚ್ಚಿ ಹೋಗುತ್ತಿದೆ ವೃತ್ತಿಪರತೆ!

Image
'ಪ್ರತಿಯೊಂದು ಪಂದ್ಯವನ್ನೂ ಆಡ್ಬೇಕು, ಪ್ರತಿಯೊಂದನ್ನೂ ಗೆಲ್ಲಬೇಕು'! ಕ್ರಿಕೆಟ್ ಬಗ್ಗೆ ಭಾರತೀಯ ಪ್ರೇಕ್ಷಕನ ನಿರೀಕ್ಷೆಯಿದು. ಹಲವು ದಶಕಗಳಿಂದ ಭಾರತೀಯ ಜೀವನದ ಅವಿಭಾಜ್ಯ ಅಂಗವೋ ಎಂಬಷ್ಟು ಮಾನ್ಯತೆ ಪಡೆದಿರುವಂಥ ಕ್ರಿಕೆಟ್ ನಿಂದ ಈ ಮಟ್ಟದ ನಿರೀಕ್ಷೆ ಮಾಡಿದಲ್ಲಿ ತಪ್ಪೇನು ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಬಹುದು. ಭಾರತೀಯ ಕ್ರಿಕೆಟ್ ತಂಡ ಹೆಚ್ಚು ಸಮರ್ಥ ಫಲತಾಂಶ ನೀಡಲು ಯಶಸ್ವಿಯಾಗದೇ ಇರುವುದಕ್ಕೆ ವೇಳಾಪಟ್ಟಿಯೇ ಕಾರಣ ಎಂಬುದು ಖಂಡಿತ. ಇತ್ತೀಚೆಗಿನ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಂದು ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಗಳನ್ನು ಆಡಿತು. ಅದಾದ ಕೆಲವೇ ದಿನಗಳಲ್ಲಿ ಶುರುವಾಯಿತು ಛಾಂಪಿಯನ್ಸ್ ಲೀಗ್. ಈ ಲೀಗ್ ಮುಗಿಯುವುದೇ ತಡ ಮತ್ತೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿ! ಈ ಸರಣಿಗಳ ನಡುವೆ ಬಿಡುವೆಲ್ಲಿದೆ ಸ್ವಾಮಿ? ಬಿಡುವಿಲ್ಲದ ದಿನಚರಿಯ ಹಿನ್ನೆಲೆಯಲ್ಲಿ ಜನರು ಟಿ20 ಪಂದ್ಯಗಳನ್ನು ಇಷ್ಟಪಡುತ್ತಾರೆ ನಿಜ. ಇಂದು ಟಿ20 ಪಂದ್ಯಗಳೇ ಹೆಚ್ಚಾಗಿವೆ ಎಂದರೆ ಅದಕ್ಕೆ ಮುಖ್ಯವಾದ ಕಾರಣ ಅದರಿಂದ ಬರುವ ಹಣ! ಟಿ20 ಪಂದ್ಯಗಳ ಆಯೋಜನೆಯಿಂದ ಎಷ್ಟು ಹಣ ಬರಬಹುದು ಎಂಬ ಆಲೋಚನೆ ಬಿಸಿಸಿಐ ಮನಸ್ಸಿನಲ್ಲಿದ್ದರೆ, ಇವುಗಳಿಂದ ತಾವೆಷ್ಟು ಹಣ ಸಂಪಾದನೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ ಆಟಗಾರರು. ಟಿ20 ಪಂದ್ಯಗಳಿಂದ ಹಣ ಬರುತ್ತೆ, ಅಂತಾರಾಷ್ಟ್ರೀಯ ಪಂದ್ಯಗ...

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?

Image
ಕರ್ನಾಟಕ ಆಡಳಿತಾತ್ಮಕ ಸೇವಾ(ಕೆಎಎಸ್) ಪರೀಕ್ಷೆಯ ಪಠ್ಯ ಬದಲಾಗುತ್ತಿದೆ. ಅಂದರೆ ಅದು ಭಾರತೀಯ ಆಡಳಿತಾತ್ಮಕ ಸೇವಾ (ಐಎಎಸ್) ಪರಿಕ್ಷೆಯ ಮಟ್ಟಕ್ಕೆ ಬರುತ್ತಿದೆ. ಆದರೆ ಐಎಎಸ್, ಕೆಎಎಸ್... ಮುಂತಾದಕ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನವರಲ್ಲಿ ಅಳುಕಿದೆ. ಹೇಗೆ ಎದುರಿಸುವುದು ಎಂಬ ಗೊಂದಲದಲ್ಲಿದೆ ಯುವ ಸಮಾಜ.        ಇಂತಿರುವಾಗ ಕೆಎಎಸ್ ಕೂಡಾ ಐಎಎಸ್ ಮಟ್ಟದ ಪಠ್ಯ ಹೊಂದಿದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರ್ಧರಿಸುವ ಅಭ್ಯರ್ಥಿಗಳು ಯಾವ ರೀತಿಯ ಸಿದ್ಧತೆ ನಡೆಸಬೇಕು? ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಅಳುಕನ್ನು ಅಭ್ಯರ್ಥಿಗಳ ಮನಸ್ಸಿನಿಂದ ತೆಗೆದು ಹಾಕುವ ಬಗೆ ಹೇಗೆ? ಇವೇ ಮುಂತಾದ ವಿಚಾರಗಳ ಬಗ್ಗೆ ಬೆಂಗಳೂರಿನ ವಿಜಯನಗರದ ಎಂ ಸಿ ಬಡಾವಣೆಯಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಕೇಂದ್ರ ಆಸ್ಪೈರ್ ಸ್ಟಡಿ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ದಡ್ಡೆ ಅವರನ್ನು `ಕನ್ನಡಪ್ರಭ' ಮಾತಾಡಿಸಿತು. ಶಿವಶಂಕರ್ ದಡ್ಡೆ  - ಕೆಎಎಸ್ ಪಠ್ಯ ಯಾವಾಗಿಂದ ಬದಲಾಗುತ್ತಿದೆ? ಮುಂದಿನ ನೋಟಿಫಿಕೇಶನ್, ಅಂದರೆ ಪ್ರಿಲಿಮಿನರಿ ಪರೀಕ್ಷೆಗೆ ಸೇರ್ಪಡೆಯಾಗುವ ಮುಂದಿನ ಬ್ಯಾಚ್ನ ಅಭ್ಯರ್ಥಿಗಳಿಗೆ ಹೊಸ ಪಠ್ಯ ಇರುವ ಸಾಧ್ಯತೆಗಳಿವೆ. ಈಗಾಗಲೇ ಹೊಸ ಪಠ್ಯ ಸಿದ್ಧವಾಗಿದೆ. ಆ ಪಠ್ಯ ಜಾರಿಯಾಗುವುದಷ್ಟೇ ಬಾಕಿ. ಸುಮಾರು 200 ಹುದ್ದೆಗಳಿಗೆ ಸರಕಾರ ಈಗಾಗಲೇ ಅನುಮತಿ ಕೊಟ್ಟಿದೆ. ಈ ತಿಂಗ...

ಉದ್ದೇಶವೊಂದೇ ಸಾಲದು, ಸಾಧನೆಯೂ ಜೊತೆಗೂಡಬೇಕು

Image
ಸರಿಯಾಗಿ ಒಂದು ವರ್ಷವಾಗಿತ್ತು ಚೀನಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಕಡಿತಗೊಂಡು. ಈ ಸಂಬಂಧವನ್ನು ಮತ್ತೆ ಸುಧಾರಿಸಿಕೊಳ್ಳಬೇಕು, ಎರಡೂ ದೇಶಗಳ ನಡುವೆ ಮತ್ತೆ ಉತ್ತಮ ಸಂಬಂಧ ಬೆಸೆದುಕೊಳ್ಳಬೇಕು ಎಂಬ ಪ್ರಯತ್ನಗಳು ಸತತವಾಗಿ ನಡೆದಿದ್ದವು. ಇದು ಸಕಾರಕ್ಕೆ ಬರುವ ಪ್ರಯತ್ನ ನಡೆದದ್ದು ಭಾರತೀಯ ರಕ್ಷಣಾ ಇಲಾಖೆಯಿಂದ. ಕೆಲವು ದಿನಗಳ ಹಿಂದೆ ಮೇಜರ್ ಜನರಲ್ ಗುರ್ ಮೀತ್ ಸಿಂಗ್ ನೇತೃತ್ವದ ರಕ್ಷಣಾ ಇಲಾಖೆಯ ಎಂಟು ಮಂದಿ ಸದಸ್ಯರನ್ನೊಳಗೊಂಡ ನಿಯೋಗವು ಚೀನಾಕ್ಕೆ ತೆರಳಿತ್ತು. ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಳ್ಳುವುದು ಈ ಭೇಟಿಯ ಉದ್ದೇಶ. ಸತತ ಒಂದು ವಾರದ ಮಾತುಕತೆ. ಚೀನಾದ ವಿವಿಧ ನಗರಗಳಿಗೆ ಭೇಟಿ ಕೊಟ್ಟು ಅಲ್ಲಿನ ಅಭಿವೃದ್ಧಿ ಮತ್ತು ಮಿಲಿಟರಿ ವಿಚಾರಗಳನ್ನು ಅಧ್ಯಯನ ಮಾಡಿತು. ಚೀನಾದ ಮಿಲಿಟರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ಅಷ್ಟೇ ಸಾಕೆ? ಫಲ ಬೇಡವೇ? ಚೀನಾ ಭೇಟಿ ಫಲಪ್ರದವಾಗಿದೆ ಎಂದು ಚೀನಾದಿಂದ ವಾಪಸಾದ ಭಾರತೀಯ ನಿಯೋಗವೇನೋ ಹೇಳಿತ್ತು. ಆದರೆ ಸಂಪೂರ್ಣ ಮಾಹಿತಿಯನ್ನು, ಒಪ್ಪಂದದ ವಿವರಗಳನ್ನು ಕೊಟ್ಟಿರಲಿಲ್ಲ. ಜೂನ್ 29ರಂದು ಇದಕ್ಕೆ ತೆರೆ ಎಳೆಯುವಂತೆ ಚೀನಾ 'ಮಿಲಿಟರಿ ಒಪ್ಪಂದದ ಬಗ್ಗೆ ಮಾತುಕತೆಗಳು ನಡೆದದ್ದೇನೋ ನಿಜ. ಆದರೆ ಒಪ್ಪಂದ ಪೂರ್ಣಗೊಳ್ಳಲು ಎರಡೂ ಕಡೆಯಿಂದ ಹಲವಾರು ಅಡೆತಡೆಗಳಿವೆ. ಸಮಸ್ಯೆಗಳಿವೆ' ಎಂದಿತು. ಎರಡೂ ದೇಶಗಳು ಜೊತೆಗೂಡಿ ಕೆಲಸ ಮಾಡುವ ಮನಸ್ಥಿತಿಯನ್ನು ಪ್ರದರ್ಶಿಸಿದವು ನಿಜ. ಆದರೆ ಹ...

ಜನರಿಗೆ ಧ್ವನಿಯಾಗುವ ನಮ್ಮ ನೋವು ಯಾರಿಗೂ ಕೇಳಿಸದೆ?

Image
ಜೀವದ ಬೆಲೆ ಏನು ಎಂಬುದನ್ನು ಪ್ರತಿಕ್ಷಣವೂ ಕಣ್ಣಾರೆ ಕಾಣುತ್ತಿದ್ದರೂ, ಜೀವದ ಹಂಗನ್ನು ಬಿಟ್ಟವರು ನಾವು. ಸಾವಿನ ಘೋರ ದೃಶ್ಯಗಳು, ಬರ್ಬರ ಹತ್ಯೆಯ ಕ್ಷಣಗಳು ಮಾನವ ಸಹಜವಾಗಿಯೇ ವಿವಿಧ ಭಾವನೆಗಳ ತಲ್ಲಣವನ್ನು ನಮ್ಮೆದೆಯಲ್ಲಿ ಎಬ್ಬಿಸಿದರೂ ಅವುಗಳ ಕಡೆಗೊಂದು ನಿರ್ಲಿಪ್ತ ದೃಷ್ಟಿಯನ್ನು ಬೀರಿ 'ವೃತ್ತಿಃ ಪರಮೋಧರ್ಮಃ' ಎಂಬ ತತ್ತ್ವಕ್ಕೆ ಬದ್ಧರಾಗಿ ಕೆಲಸ ಮಾಡುವವರು. ಇಷ್ಟು ವಿವರಣೆ ಕೊಡುವಾಗಲೇ ನಾವು ಪತ್ರಕರ್ತರು ಎಂಬುದು ಗೊತ್ತಾಗಿರಬಹುದು.  ಜೀವನವೇ ಹಾಗೆ. ಅದು ಎಳೆದುಕೊಂಡು ಹೋದತ್ತ ಸಾಗುವುದಷ್ಟೇ ಜೀವಿಗಳಿಂದ ಸಾಧ್ಯ. ಆದರೆ ಅದೆಷ್ಟೋ ಬಾರಿ ನಾವು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗುತ್ತದೆ. ತಾನು ಹೋಗೆನೆಂಬ ಹಠಮಾರಿ ಭಾವವನ್ನು ಹೊಮ್ಮಿಸುವ ಜೀವನವನ್ನು ನಮಗೆ ಬೇಕಾದ ದಿಕ್ಕಿನತ್ತ ಸೆಳೆದುಕೊಳ್ಳಬೇಕಾಗುತ್ತದೆ. ಸಾಮಾನ್ಯ ಸಮಾರಂಭಗಳಲ್ಲಿ ಭಾಗವಹಿಸಿ ವರದಿ ಮಾಡುವಾಗ ಇರುವ ನೆಮ್ಮದಿ, ಅಪರಾಧ ಜಗತ್ತಿನ ಬಗ್ಗೆ, ಯುದ್ಧದ ಕ್ಷಣಗಳ ಬಗ್ಗೆ ವರದಿ ಮಾಡುವಾಗ ಅದೆಷ್ಟೋ ದೂರಕ್ಕೆ ಓಡಿ ಹೋಗಿರುತ್ತದೆ. ಟಿವಿ ಮಾಧ್ಯಮಗಳ ಪ್ರಭಾವದಿಂದಾಗಿ 'ನಾ ಮೊದಲು ವರದಿ ಮಾಡಬೇಕು, ಬ್ರೇಕಿಂಗ್ ನ್ಯೂಸ್ ನಾನೇ ಕೊಡಬೇಕು' ಎಂಬ ಧಾವಂತ ಮುದ್ರಣ ಮಾಧ್ಯಮಗಳಲ್ಲಿ ಕೊಂಚ ಕಡಿಮೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಹಾಗಂತ ಅದೆಷ್ಟೋ ಬಾರಿ ಟಿವಿ ಮಾಧ್ಯಮಗಳಿಗಿಂತ ವೇಗವಾಗಿ, ಅವುಗಳಿಗೆ ಸಿಗದ ಸುದ್ದಿಯನ್ನು ಮುಖಪುಟದಲ್ಲೇ ಪ್ರಕಟಿಸಿದ ದಾಖಲ...

ಪರಿವರ್ತನೆಯ ಹಾದಿಯಲ್ಲಿ ಮುಸ್ಲಿಮ್ ಮಹಿಳೆ

ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವೇ ಸುಶಿಕ್ಷಿತವಾದಂತೆ. ಒಬ್ಬ ಮಹಿಳೆಗೆ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದರೆ ಒಂದು ಕುಟುಂಬವೇ ಹಕ್ಕುಗಳ ಬಗ್ಗೆ ಜಾಗೃತಗೊಂಡಂತೆ! ಈ ಮಾತು ಹೇಳಬೇಕೆನ್ನಿಸಿದ್ದು ಭಾರತೀಯ ಮುಸ್ಲಿಮ್ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುತ್ತಿರುವ ಮಹತ್ವದ ಬೆಳವಣಿಗೆಯನ್ನು ಗಮನಿಸಿದಾಗ. ಆಕೆ ನಾಝಿಯಾ ನಿಜಾಮಿ. ಗಂಡನೊಂದಿಗೆ ಸಂಸಾರ ಸರಿಹೋಗಲಿಲ್ಲ. ಪ್ರತಿದಿನ ಕಿರುಕುಳ ಕೊಡುತ್ತಿದ್ದ ಗಂಡನೊಂದಿಗೆ ಬದುಕು ಹಂಚಿಕೊಳ್ಳುವುದು, ತನಗಾಗುತ್ತಿರುವ ನೋವನ್ನು ಸಹಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸಾಧ್ಯ? ತಾಳ್ಮೆ, ಸಹನೆಯ ಕಟ್ಟೆಯೊಡೆದಾಗ ಒಳಗಿನ ನೋವು, ದುಃಖ, ಹತಾಶೆ ಹೊರಗೆ ಧುಮ್ಮಿಕ್ಕಲೇಬೇಕು, ಸಿಡಿವ ಅಗ್ನಿಪರ್ವತದಂತೆ. ನಿಜಾಮಿಯ 'ಸಹನಾಕಟ್ಟೆ'ಯೂ ಸಿಡಿಯಿತು. ಸಂಸಾರದ ಕೊಂಡಿ ತಪ್ಪಿತು. ಗಂಡ ಎನ್ನಿಸಿಕೊಂಡ ಸಯ್ಯದ್ ನದೀಮ್ 'ತಲಾಖ್' ಎಂದ. ನಿಜಾಮಿ ಬಿಡಲಿಲ್ಲ, ಜೀವನಾಂಶ ಕೇಳಿದಳು. 'ಕೊಡಕ್ಕಾಗಲ್ಲ' ಎಂದ ಸಯ್ಯದ್ ನನ್ನು ಸುಮ್ಮನೇ ಬಿಟ್ಟರೆ ತನ್ನ ಹಕ್ಕು ಕಳಕೊಂಡಂತೆ ಎಂಬ ಸತ್ಯವನ್ನು ಅರಿತುಕೊಂಡಿರುವ ನಿಜಾಮಿ ನ್ಯಾಯಾಲಯದ ಕಟಕಟೆ ಏರಿದಳು. ಕೆಳಹಂತದ ನ್ಯಾಯಾಲಯ ಆಕೆಯ ಪರವಾಗಿಯೇ ತೀರ್ಪು ನೀಡಿ, ಮಾಸಿಕ 8,000 ರು. ಜೀವನಾಂಶ ನೀಡುವಂತೆ ಸಯ್ಯದ್ ನದೀಮ್ ಗೆ ಆದೇಶ ನೀಡಿತು. ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಸಯ್ಯದ್. 'ಆಕೆಗೆ ಜೀವನಾಂಶ ಕ...

'ಮಂಗಳನಲ್ಲಿ ಗಾಂಧಿ ಚಿತ್ರ'ದ ಜಾಡು ಹಿಡಿದು

Image
ಮಂಗಳಗ್ರಹದಲ್ಲಿ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮುಖದ ಚಿತ್ರ ಕಂಡಿದೆಯಂತೆ! ಹೀಗೊಂದು ಸುದ್ದಿ ಜೂನ್ 13ರಂದು ವೈಜ್ಞಾನಿಕ ವಲಯದಿಂದ ಪುಟಿದು ಬಂತು. ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಗೂ ಮಂಗಳಗ್ರಹಕ್ಕೂ ಎತ್ತಣಿಂದೆತ್ತ ಸಂಬಂಧ? ಸಂಶೋಧನೆಯ ಇನ್ನೂ ಒಂದು ಅಂಶ ಹೇಳುವ ಪ್ರಕಾರ ಈ ಚಿತ್ರವನ್ನು 'ಮಾನವರೇ' (?) ಕೆತ್ತಿದ್ದಾರೆ. ಯಾವ ರೀತಿ ನಾವು ಶಿಲೆಯಲ್ಲಿ ಕಲೆಯನ್ನು ಕೆತ್ತುತ್ತೇವೆಯೋ ಅಂಥದ್ದೇ ಒಂದು ಚಿತ್ರಣ ಇದು. ಈ ಚಿತ್ರ ಮಾತ್ರ ಖಡಾಖಂಡಿತವಾಗಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನೇ ಹೋಲುತ್ತದೆ. ಯೂರೋಪಿನ ಮಾರ್ಸ್ ಎಕ್ಸ್ ಪ್ರೆಸ್ ಶೋಧನೌಕೆ ತೆಗೆದಂಥ ಮಂಗಳಗ್ರಹದ ಚಿತ್ರಗಳನ್ನು ಅಧ್ಯಯನ ಮಾಡಿದ ಇಟಲಿಯ ಬಾಹ್ಯಾಕಾಶ ಸಂಶೋಧಕ ಮಟ್ಟೆವೋ ಲಾನೆವೋ 'ಮಗಳನಲ್ಲಿ ಕಾಣುತ್ತಿರುವುದು ಗಾಂಧೀಜಿಯ ಚಿತ್ರ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಮೀಸೆ, ದಟ್ಟ ಹುಬ್ಬುಗಳುಳ್ಳ, ಪೂರ್ಣ ಬಕ್ಕತಲೆಯ ಈ ಚಿತ್ರವು ಸ್ಪಷ್ಟವಾಗಿ ಗಾಂಧೀಜಿಯನ್ನು ಹೋಲುತ್ತದೆ' ಎಂದು ಹೇಳುತ್ತಾರೆ. ವಾದ ಏನೇ ಇರಲಿ! ಅಲ್ಲಿ ಕಾಣುತ್ತಿರುವುದು ಗಾಂಧೀಜಿಯ ಚಿತ್ರವೇ ಆಗಲಿ, ಬೇರೆ ಯಾರದ್ದೇ ಆಗಲಿ. ಮಂಗಳಗ್ರಹದಲ್ಲಿ ಕಂಡದ್ದೆಂದು ಹೇಳಿಕೊಳ್ಳುತ್ತಿರುವ ಚಿತ್ರವೊಂದು ವೈಜ್ಞಾನಿಕ ವಲಯದಲ್ಲಿ ಭಾರೀ ಅಚ್ಚರಿಯ ಅಲೆಗಳನ್ನು ಹುಟ್ಟಿಸಿದ್ದು, ವಿಜ್ಞಾನಿಗಳಲ್ಲಿ ಮಂಗಳನ ಸಂಶೋಧನೆಯ ಬಗ್ಗೆ ಇನ್ನಷ್ಟು ಪ್ರೇರೇಪಣೆ ನೀಡಿದ್ದಂತೂ ನಿಜ. ಆದರೂ ಇಲ್ಲೊಂದು ಅನುಮ...

ಹ್ಯಾಕರ್ಸ್, ಉಗ್ರರ ಮಧ್ಯೆ ಉದಾಸ 'ಶಾಂತಿದೂತ'!

Image
ಅದ್ಯಾಕೋ 1962ರಲ್ಲಿ ನಮ್ಮ ಸರ್ಕಾರ ಮಾಡಿದಂಥ ಮೂರ್ಖತನ ಮತ್ತೆ ಮತ್ತೆ ಕಾಡುತ್ತಿದೆ. ಚೀನೀ ಸೈನಿಕರು ಟಿಬೆಟ್ ಗೆ ಬಂದು ಕುಳಿತಿದ್ದಾರೆ, ಸೇನಾ ನೆಲೆಗಳನ್ನು ಸ್ಥಾಪಿಸುತ್ತಿದ್ದಾರೆ, ರಸ್ತೆಗಳು ಮತ್ತಿತರ ಮೂಲಸೌಕರ್ಯಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಾದಾಗಲೂ ಸಹ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಮತ್ತವರ ಸಚಿವ ಸಂಪುಟದ ಸದಸ್ಯರು, ಮಿಲಿಟರಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದರು. ಏಕಾಏಕಿ ಚೀನಾ ದಾಳಿಯಿಟ್ಟಾಗ ನೆಹರು ಹೇಳಿಕೆಗಳನ್ನು ನಂಬಿದ್ದ ದೇಶದ ಜನತೆ ತಲ್ಲಣಗೊಂಡಿದ್ದರು. ಆ ಯುದ್ಧದಲ್ಲಿ ಹೀನಾಯ ಸೋಲನುಭವಿಸಬೇಕಾಗಿ ಬಂದದ್ದು, ನಮ್ಮ ಅನೇಕ ಸೈನಿಕರು ಚೀನೀಯರಿಗೆ ಸೆರೆ ಸಿಕ್ಕಬೇಕಾಗಿ ಬಂದದ್ದು ಎಲ್ಲ ಘಟನೆಗಳೂ ಈಗಲೂ ಕಣ್ಣಮುಂದೆಯೇ ನಡೆಯುತ್ತಿರುವಂತೆ ಧುತ್ತನೆ ಪ್ರತ್ಯಕ್ಷವಾಗುತ್ತವೆ. 'ಹಿಂದಿ, ಚೀನೀ ಭಾಯಿ ಭಾಯಿ' ಎಂದು ಹೇಳುತ್ತಾ ಬಗಲಲ್ಲೇ ನಿಂತುಕೊಂಡು ಗುಂಡಿನ ಮಳೆಗರೆದ ಚೀನಾವನ್ನು ಓಲೈಸುವುದಕ್ಕೆ ನಮ್ಮ ನಾಯಕರು ಈಗಲೂ ಪ್ರಯತ್ನ ಪಡುತ್ತಿದ್ದಾರೆ. ಚಿತ್ರ: ಸಂತೋಷ್ ಸಸಿಹಿತ್ಲು ಬ್ರಿಟಿಷರು ಬಿತ್ತಿದಂತಹ ಸೇಡಿನ ಬೀಜವನ್ನು ಹೆಮ್ಮರವಾಗಿ ಬೆಳೆಸಿಕೊಂಡಿರುವಂಥ ಪಾಕಿಸ್ತಾನದ್ದೂ ಇದೇ ಕಥೆ. ತನ್ನ ಸೈನಿಕರನ್ನು, ಐಎಸ್ ಐ ಏಜೆಂಟರನ್ನು ಭಾರತದೊಳಕ್ಕೆ ನುಗ್ಗಿಸಿ ಅವಾಂತರ ಸೃಷ್ಟಿಸುತ್ತಿರುವ ಪಾಕಿಸ್ತಾನದ ಬಗ್ಗೆ ನಾವು ತಳೆದಿರುವ ಮೃದು ಭಾವ ಎದೆಯಾಳಕ್ಕೆ ಭರ್ಜಿಯಿಂದ ಚುಚ್ಚಿ ...

ಈ 'ಹೋರಾಟ'ದ ಯಾನ ನಮಗೆಂದು ಸಾಧ್ಯ?

Image
Endeavour- ಅಂದರೆ ಹೋರಾಟ, ಪ್ರಯತ್ನ. ಬಾಹ್ಯಾಕಾಶದಲ್ಲಿ ಮಾನವ ಕಾಲಿಟ್ಟು, ಅಲ್ಲಿಂದ ವಿಸ್ಮಯಗಳ ಆಗರವನ್ನೇ ಬಗೆದು ನೋಡುವಂಥ ಕಲ್ಪನೆಯನ್ನು ಸಾಕಾರಗೊಳಿಸಿಕೊಳ್ಳುವ ಕನಸು ಕಂಡ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಪಾಲಿಗೆ ಅದು ನಿಜವಾದ 'ಹೋರಾಟ'ವೇ ಸರಿ. ಬಾಹ್ಯಾಕಾಶದಲ್ಲೊಂದು ನಿಲ್ದಾಣ ಸ್ಥಾಪನೆ ಮಾಡಬೇಕು, ಆ ನಿಲ್ದಾಣವನ್ನು ಅಭಿವೃದ್ಧಿಗೊಳಿಸಬೇಕು, ಬಾಹ್ಯಾಕಾಶ ಯಾತ್ರೆ ಹೊರಟಂಥ ಮಾನವ ಭೂಮಿಯಿಂದ ಒಮ್ಮಿಂದೊಮ್ಮೆಗೇ ತಲುಪಲು ಸಾಧ್ಯವಾಗದಂತಹ ಸ್ಥಳಗಳನ್ನು ತಲುಪುವುದಕ್ಕೆ ಈ ನಿಲ್ದಾಣ ನೆರವಾಗಬೇಕು, ಒಂದೊಮ್ಮೆ ಅನಿವಾರ್ಯವಾಗಿ ಗಗನನೌಕೆಗೆ ಸ್ವಲ್ಪ ವಿಶ್ರಾಂತಿ ಕೊಡಬೇಕೆಂಬ ಪರಿಸ್ಥಿತಿ ಬಂದರೂ ಇಳಿದುಕೊಳ್ಳುವುದಕ್ಕೊಂದು ನೆಲೆಯಿರಬೇಕು. ಈ ಎಲ್ಲ ಕನಸುಗಳನ್ನು ನನಸಾಗಿಸುವ ಹೋರಾಟಕ್ಕೆ ಅಣಿಯಾದಂತಹ ನಾಸಾ ಅದನ್ನು ಸಾಧಿಸಿ ತೋರಿಸಿತು. ಈ ಬಾಹ್ಯಾಕಾಶ ನಿಲ್ದಾಣವನ್ನು ಕಟ್ಟುವುದೇ ಒಂದು ಹೋರಾಟವಾಗಿತ್ತು. ಅಂಥ ಹೋರಾಟ ಯಶಸ್ವಿಯಾಗಬೇಕು ಎಂದಾದರೆ ಭೂಮಿ ಮತ್ತು ಬಾಹ್ಯಾಕಾಶದ ನಡುವಿನ ನಂಟು ಗಟ್ಟಿಯಾಗಿರಬೇಕು. ಆ ಬಂಧಕ್ಕೆ ತಡೆಯಿರಕೂಡದು. ಅಂಥದ್ದೊಂದು ಬಂಧವನ್ನು ಬೆಸುಗೆ ಹಾಕಿದ್ದು ನಾಸಾದ ಗಗನನೌಕೆ Endeavour. ಇಷ್ಟೆಲ್ಲ ಮನಃಪಟಲದಲ್ಲಿ ಹಾದು ಹೋದದ್ದು ಮೊನ್ನೆ ಜೂನ್ 1ರಂದು ಈ ಎಂಡೆವರ್ ತನ್ನ ಅಭಿಯಾನವನ್ನು ಕೊನೆಗೊಳಿಸಿದಾಗ! ಬಾಹ್ಯಾಕಾಶ ಕ್ಷೇತ್ರದಲ್ಲಿ ವಿವಿಧ ಸಾಧನೆಗಳನ್ನು ಮಾಡುವ ಕನಸು ಕಟ್ಟುತ್ತಿರುವ ಹಲವಾರು ಮನಸ್ಸುಗಳು ಭಾರತ...

ಅಮೂಲ್ಯ....

Image
ಮಾನವ ಕಂಡ ಕಂಡಲ್ಲಿ ಭೂಮಿಗೆ ತೂತು ಕೊರೆದು ನೀರಿನ ನಿಕ್ಷೆಪಗಳನ್ನೇ ನಾಶ ಮಾಡುತ್ತಿದ್ದಾನೆ. ಮತ್ತೊಂದೆಡೆ ಕಾಡುಗಳನ್ನು ಕಡಿದು ಮಳೆ ಕಡಿಮೆಯಾಗುವಂತೆ ಮಾಡಿದ್ದಾನೆ. ನೀರು ಇಂಗಿ ಅಂತರ್ಜಲ ಹೆಚ್ಚುವುದೂ ನಿಂತು ಹೋಗಿದೆ. ತೀವ್ರ ಬಾಯಾರಿದ ಕಾಗೆ ನಲ್ಲಿಯಲ್ಲಿ ನೀರು ಬರುವುದೇ ಎಂದು ಆಸೆಯಿಂದ ನೋಡುತ್ತಿದೆ. ನೀರು ಎಷ್ಟು ಅಮೂಲ್ಯ ಎಂಬುದನ್ನು ಈ ಕಾಗೆ ಮನುಷ್ಯರಿಗೆ ಹೇಳಿ ಕೊಡುತ್ತಿದೆಯೇ?

ಗೌಡ್ರು ಯಾಕ್ ಹಿಂಗೆ ಕುಂತವ್ರೆ .....

Image
ಬೆಳಗಾವಿಯಲ್ಲಿ ನಡೆದ ಜೆ. ಡಿ. ಎಸ್ ಸಮಾವೇಶದಲ್ಲಿ ದೇವೇ ಗೌಡ್ರು ಕಾಂಗ್ರೆಸ್ , ಬಿಜೆಪಿ ಯನ್ನು ಹೇಗೆ ಮಟ್ಟ ಹಾಕಲಿ ಎಂದು ಯೋಚನಾ ಮಗ್ನರಾಗಿ ಕುಳಿತ ಪರಿ ಇದು. ಅಥವಾ ಜೋರು ನಿದ್ದೆ ತೂಕಡಿಸಿ ಹಿಂಗ್ ಕುಂತರೋ ? ಯಾರಿಗ್ ಗೊತ್ತು?

ಜ್ಞಾನೋದಯ (?)

Image
ಒಂದು ಕಾಲ ಇತ್ತು. ಭಾರತದಲ್ಲಿನ ಮಹಾನುಭಾವರು (?) ಅಮೆರಿಕದಲ್ಲಿ ಉದ್ಯೋಗ ಸಂಪಾದಿಸಿದರೆ ತಮ್ಮಷ್ಟು ಪ್ರಖಾಂಡ ಬುದ್ಧಿವಂತರು ಯಾರೂ ಇಲ್ಲ ಎಂದು ಭಾವಿಸಿದ್ದರು. ಈಗ ಕಾಲ ಬದಲಾಗಿದೆ. ಆರ್ಥಿಕ ಕುಸಿತ ಇಡೀ ಅಮೇರಿಕೆಯನ್ನು ನಡುಗಿಸಿದೆ. ಲಕ್ಷಾಂತರ ಮಂದಿ ನೌಕರಿ ಕಳೆದುಕೊಂಡಿದ್ದಾರೆ. ಕೇವಲ ಐಟಿ ಕಂಪನಿಗಳು ಮಾತ್ರವಲ್ಲ, ಕಾನೂನು ಪರಿಣತರು ಕೂಡಾ ಪಿಂಕ್ ಸ್ಲಿಪ್ ಪಡೆದಿದ್ದಾರೆ. ಕಳೆದ ೨ ತಿಂಗಳಲ್ಲಿ ೫೦೦೦ ಕಾನೂನು ಪರಿಣತರು ನಿರುದ್ಯೋಗಿಗಳಾಗಿದ್ದಾರೆ ವಿಶೇಷ ಎಂದರೆ ಇವರೆಲ್ಲರ ಕಣ್ಣು ಈಗ ಭಾರತದ ಮೇಲೆ ಬಿದ್ದಿರುವುದು. ಭಾರತದಲ್ಲಿ ಕಾನೂನು ಪರಿಣತರ ಅಗತ್ಯ ಬಹಳವಾಗಿದ್ದು ಇವರಲ್ಲಿ ಆಶಾ ಭಾವ ಮೂಡಿಸಿದೆ. ಇದರಲ್ಲಿ ಅಚ್ಚರಿ ಪದಬೇಕಾದ್ದಿಲ್ಲ ಆದರೆ ಅಮೇರಿಕಾ ಎಂದರೆ ಜೊಲ್ಲು ಸುರಿಸುತ್ತಿದ್ದ ಭಾರತೀಯರು ಸ್ವಲ್ಪ ಯೋಚಿಸಬೇಕಾಗಿದೆ. ಅಮೆರಿಕದಲ್ಲಿ ನೌಕರಿ ಹಿಡಿದಿದ್ದ ಹೆಚ್ಚಿನ ಭಾರತೀಯರು ಕೂಡ ತವರಿಗೆ ವಾಪಸಗುತ್ತಿದ್ದರೆ. ಬಹುಷಃ ತಾಯ್ನಾಡಿನ ಪ್ರಾಮುಖ್ಯತೆ ಇವರಿಗೆ ಈಗ ಅರ್ಥ ಆಗಿದೆ ಎಂದು ಕಾಣುತ್ತದೆ. ಏನಂತೀರಿ?

ವಿಶ್ವ ಸುಂದರಿ ಮುಕುಟ ಮುಡಿದಾಳೆ ಈ ಪಾರ್ವತಿ....

Image
ಮಳ್ಳಿ ಹುಡುಗಿ ಪಾರ್ವತಿ ವಿಶ್ವ ಸುಂದರಿ ಮುಕುಟ ಮುದಿಯುತ್ತಾಳೆಯೇ...? ಇ೦ಥದ್ದೊ೦ದು ಪ್ರಶ್ನೆ ಭಾರತೀಯ ರಸಿಕರನ್ನು ಕಾಡುತ್ತಿದೆ... ವಿಷಯ ಏನಪ್ಪಾ ಅ೦ದ್ರೆ ಡಿ೧೩ ರ೦ದು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ವಿಶ್ವ ಸುಂದರಿ ಸ್ಪರ್ಧೆಯ ಅ೦ತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. ಪ್ರಶಸ್ತಿ ಗೆಲ್ಲುವ ಫೆವರಿಟ್ ಸುಂದರಿಯರ ಸಾಲಿನಲ್ಲಿ ನಮ್ಮ ಪಾರ್ವತಿಯೂ ಇದ್ದಾಳೆ. ಪೂರ್ತಿ ಹೆಸರು ಪಾರ್ವತಿ ಒಮ್ಮನ್ ಕುಟ್ಟನ್ ಮೂಲತಃ ಕೇರಳದವಳು. ೫ ಅಡಿ ೯ ಇಂಚು ಎತ್ತರದ ಈಕೆ ೨೧ರ ಹರೆಯದ ಚೆಲುವೆ. ಕಳೆದ ಎಪ್ರಿಲ್ ನಲ್ಲಿ ಹೈದರಾಬಾದ್ ನಲ್ಲಿ ನಡೆದ ಮಿಸ್ ಇ೦ಡಿಯಾ ಸ್ಪರ್ಧೆಯಲ್ಲಿ ಜಯ ಗಳಿಸುವ ಮೂಲಕ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾಳೆ. ೧೯೬೬ರಲ್ಲಿ ರೀಟ ಫಾರಿಯಾ, ೧೯೯೪ರಲ್ಲಿ ಐಶ್ವರ್ಯಾ ರೈ, ೧೯೯೭ರಲ್ಲಿ ಡಯಾನಾ ಹೇಡನ್, ೧೯೯೯ರಲ್ಲಿ ಯುಕ್ತಾ ಮುಖಿ, ೨೦೦೦ದಲ್ಲಿ ಪ್ರಿಯಾ೦ಕಾ ಚೋಪ್ರಾ ವಿಶ್ವ ಸುಂದರಿ ಕಿರೀಟ ಮುಡಿದಿದ್ದರು ಇದೀಗ ಸ್ಪರ್ಧಿಸುತ್ತಿರುವ ಪಾರ್ವತಿಯೂ ಕಿರೀಟದೊ೦ದಿಗೇ ಮರಳಲಿ ಅಲ್ಲವೆ? ಪಾರ್ವತಿಯ ಒ೦ದಿಷ್ಟು ಫೋಸ್ ಗಳನ್ನುಇಲ್ಲಿ ಕೊಟ್ಟಿದ್ದೇನೆ ನೋಡಿ....

ಇನ್ನು ಮು೦ದೆ ಈಕೆ ಡಾಕ್ಟರ್ ಸಾನಿಯಾ...

Image
ಭಾರತೀಯ ಮಹಿಳಾ ಟೆನ್ನಿಸ್ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಹೈದರಾಬಾದ್ ಬೆಡಗಿ ಸಾನಿಯಾ ಮಿರ್ಜಾ ಇನ್ನು ಮು೦ದೆ ಡಾಕ್ಟರ್ ಸಾನಿಯಾ ಮಿರ್ಜಾ. ಅರೆರೆ... ಆಗಲೇ ನಿಮ್ಗೆ ಜ್ವರ, ಶೀತ, ತಲೆ ನೋವು ಎಲ್ಲ ಒಟ್ಟೊಟ್ಟಿಗೇ ಬ೦ದು ಬಿಡ್ತಾ? ಸಾನಿಯಾ ಡಾಕ್ಟರ್ ಹತ್ರ ಹೋಗಿ ಔಷಧಿ ತಗೋ೦ಡು ಬರ್ತೇನೆ ಅ೦ತ ಹೊರಟೆ ಬಿಟ್ಟಿದ್ದೀರಲ್ರಿ.... ಸ್ವಲ್ಪ ಸಮಾಧಾನ. ಸಾನಿಯಾ ಔಷಧಿ ಕೊಡೊ ಡಾಕ್ಟರ್ ಅಲ್ಲ... ಆಕೆಗೆ ಎ೦.ಜಿ.ಆರ್. ಎಜ್ಯುಕೇಶನ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ಗೌರವ ಪಿ.ಎಚ್.ದಿ. ನೀಡಿದೆ. ವೆಲ್ ಡನ್ ಸಾನಿಯಾ.

ಕ್ಷಮಿಸಿ ಮಿತ್ರರೆ...

Image
ಕ್ಷಮಿಸಿ ಮಿತ್ರರೆ ಕ೦ಪ್ಯೂಟರ ಮಾಡಿದ ಅಚಾತುರ್ಯ ದಿ೦ದ ಚ೦ದಮಾಮನ ಮನೆಯತ್ತ.... ಲೇಖನದ ಜೊತೆಗೆ ಜನಾ ಬರೆದ ವ್ಯ೦ಗ್ಯ ಚಿತ್ರ ಪ್ರಕಟವಾಗಿಲ್ಲ. ಆ ವ್ಯ೦ಗ್ಯ ಚಿತ್ರಗಳನ್ನು ಪ್ರತ್ಯೇಕವಾಗಿ ಪ್ರಕಟಿಸುತ್ತಿದ್ದೇನೆ. ಅಚಾತುರ್ಯಕ್ಕೆ ಕ್ಷಮೆ ಇರಲಿ.
ಚ೦ದಮಾಮನ ಮನೆಯತ್ತ ... ಯಾ೦ತ್ರಿಕ ಬದುಕಿನ ಜ೦ಜಾಟದ ನಡುವೆ ನಗುವೆ೦ಬುದೇ ಮರೆತು ಹೋಯಿತೋ ? ಎ೦ದು ಚಿ೦ತಿಸುತ್ತಾ ಮನೆಯತ್ತ ಹೆಜ್ಜೆ ಹಾಕತೊಡಗಿದೆ . ಮುದ್ದಿನ ಮಡದಿಯೂ " ನೀವು 24 ಗ೦ಟೆಯೂ ಕೆಲಸ ... ಕೆಲಸ ... ಎ೦ದು ಒದ್ದಾಡುತ್ತಿರಿ . ನನ್ನೊ೦ದಿಗೆ ಕ್ಷಣ ಕಾಲ ಪ್ರೀತಿಯಿ೦ದ ಮಾತಾಡಲೂ ನಿಮಗೆ ಪುರುಸೊತ್ತು ಇಲ್ಲ " ಎ೦ದು ಆಗಾಗ ಬಯ್ಯುತ್ತಿರುತ್ತಾಳೆ . ಏನು ಮಾಡೋದು ? ಜೀವನ ರಥ ಸಾಗಬೇಕು ಎ೦ದಾದರೆ ಸ೦ಪಾದನೆ ಮಾಡಲೇ ಬೇಕು . ಯೋಚಿಸುತ್ತಾ ಮನೆ ತಲುಪಿದಾಗ ಮಡದಿ ಚ೦ದಿರಾ ಮತ್ತು ಮುದ್ದಿನ ಮಗಳು ಮ೦ದಿರಾ ನಡುವೆ ವಾಗ್ಯುದ್ಧ ನಡೆಯುತ್ತಿತ್ತು . " ಮುದ್ದು ... ಚಿನ್ನು ... ಮರಿ ... ಊಟ ಮಾಡು ಕ೦ದ ... ನಾನು ನಿ೦ಗೆ ಚ೦ದಮಾಮ ತ೦ದು ಕೊಡ್ತೇನೆ " ಎ೦ದು ಮಗಳಿಗೆ ಊಟ ಮಾಡಿಸಲು ಮಡದಿ ಒದ್ದಾಡುತ್ತಿದ್ದಳು . ಮಗಳೋ " ಜಗಮೊ೦ಡು ". ಊಟ ಎ೦ದರೆ ಅವಳು ಓಟ ಎ೦ದು ತಪ್ಪಿಸಿಕೊ೦ಡು ಕಾಟ ಕೊಡುತ್ತಾಳೆ . ತಾಯಿ , ಮಗಳ ಹೋರಾಟ ಕ೦ಡು ನನ್ನ ತುಟಿಯ ಅ೦ಚಿನಲ್ಲಿ ನಗು ಮೂಡಿತು . ಚಿನ್ನ ... ಊಟ ಮಾಡಲ್ವಾ ? ನಿ೦ಗೆ ಆಟ ಆಡಕ್ಕೆ ಚ೦ದಮಾಮ ಬೇಡ್ವ ? ನಿ೦ಗೆ ದೊಡ್ಡ ಚ೦ದಮಾಮ ತ೦ದು ಕೊಡ್ತೇನೆ " ಎ೦ದು ಮಗಳನ್ನು ಎತ್ತಿಕೊ೦ಡು ರಮಿಸಿದೆ . ನನ್ನ ಕೈ ಯಿ೦ದ ಕೊಸರಿಕೊ೦ಡು ಕೆಳಗಿಳಿದ ಮಗಳು ಊಟ...