ಜ್ಞಾನೋದಯ (?)


ಒಂದು ಕಾಲ ಇತ್ತು. ಭಾರತದಲ್ಲಿನ ಮಹಾನುಭಾವರು (?) ಅಮೆರಿಕದಲ್ಲಿ ಉದ್ಯೋಗ ಸಂಪಾದಿಸಿದರೆ ತಮ್ಮಷ್ಟು ಪ್ರಖಾಂಡ ಬುದ್ಧಿವಂತರು ಯಾರೂ ಇಲ್ಲ ಎಂದು ಭಾವಿಸಿದ್ದರು. ಈಗ ಕಾಲ ಬದಲಾಗಿದೆ. ಆರ್ಥಿಕ ಕುಸಿತ ಇಡೀ ಅಮೇರಿಕೆಯನ್ನು ನಡುಗಿಸಿದೆ. ಲಕ್ಷಾಂತರ ಮಂದಿ ನೌಕರಿ ಕಳೆದುಕೊಂಡಿದ್ದಾರೆ.

ಕೇವಲ ಐಟಿ ಕಂಪನಿಗಳು ಮಾತ್ರವಲ್ಲ, ಕಾನೂನು ಪರಿಣತರು ಕೂಡಾ ಪಿಂಕ್ ಸ್ಲಿಪ್ ಪಡೆದಿದ್ದಾರೆ. ಕಳೆದ ೨ ತಿಂಗಳಲ್ಲಿ ೫೦೦೦ ಕಾನೂನು ಪರಿಣತರು ನಿರುದ್ಯೋಗಿಗಳಾಗಿದ್ದಾರೆ

ವಿಶೇಷ ಎಂದರೆ ಇವರೆಲ್ಲರ ಕಣ್ಣು ಈಗ ಭಾರತದ ಮೇಲೆ ಬಿದ್ದಿರುವುದು. ಭಾರತದಲ್ಲಿ ಕಾನೂನು ಪರಿಣತರ ಅಗತ್ಯ ಬಹಳವಾಗಿದ್ದು ಇವರಲ್ಲಿ ಆಶಾ ಭಾವ ಮೂಡಿಸಿದೆ. ಇದರಲ್ಲಿ ಅಚ್ಚರಿ ಪದಬೇಕಾದ್ದಿಲ್ಲ

ಆದರೆ ಅಮೇರಿಕಾ ಎಂದರೆ ಜೊಲ್ಲು ಸುರಿಸುತ್ತಿದ್ದ ಭಾರತೀಯರು ಸ್ವಲ್ಪ ಯೋಚಿಸಬೇಕಾಗಿದೆ. ಅಮೆರಿಕದಲ್ಲಿ ನೌಕರಿ ಹಿಡಿದಿದ್ದ ಹೆಚ್ಚಿನ ಭಾರತೀಯರು ಕೂಡ ತವರಿಗೆ ವಾಪಸಗುತ್ತಿದ್ದರೆ. ಬಹುಷಃ ತಾಯ್ನಾಡಿನ ಪ್ರಾಮುಖ್ಯತೆ ಇವರಿಗೆ ಈಗ ಅರ್ಥ ಆಗಿದೆ ಎಂದು ಕಾಣುತ್ತದೆ. ಏನಂತೀರಿ?

Comments

Popular posts from this blog

ಉದ್ದೀಪನದ ಸುಳಿಯಲ್ಲಿ ಬೀಳುವುದು ಹೀಗೆ...

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?

ಮುತ್ತಿಗೆ ನಮಗೂ ಬೇಕೆ?: ಮುಂಬೈಗೆ ಬಂತು 'ಆಕ್ಯುಪೈ ವಾಲ್ ಸ್ಟ್ರೀಟ್' ಪ್ರತಿಭಟನೆ