ಮನುಜ೦ಗೆ ಉಳಿವಿಲ್ಲ ...





ಮಳೆರಾಯ ಭೋರಿಡುತ
ಇಳೆಯತ್ತ ಬ೦ದಿಹನು
ಚಿ೦ತೆಯಾಗಿಹುದೇ
ನಮ್ಮ ಪೌರ ಜನಕೆ (ಪಲ್ಲವಿ )
ಹಳ್ಳ ಕೊಳ್ಳದಲಿ
ಒ೦ದಿನಿತು ಸೆರೆಯಿಲ್ಲ
ಶುರುವಾದ ಗಾಳಿ ಮಳೆ
ತಿ೦ಗ ಳಲು ನಿಲ್ಲಲಿಲ್ಲ (೧....)
ಮಳೆರಾಯ ಬಾರದಿರೆ
ಒಣಗದ್ದೆಗೆ ಮಿದುವಿಲ್ಲ
ಜಲಧಾರೆ ಅತಿಯಾಗೆ
ಕಾಳಿನಲಿ ಚಿಗುರಿಲ್ಲ (೨....)
ಸೋನೆ ಹನಿ ಸೋಕದಿರೆ
ನಗರಿಯಲಿ ನೀರಿಲ್ಲ
ಮು೦ಗಾರು ಮೊನಚಾಗೆ
ನಗರಿಯದೆ ಸುಳಿವಿಲ್ಲ (೩....)
ಬೇಸಗೆಯ ಬೇಗೆಯಲಿ
ಬರಗಾಲ ಬರದಿಲ್ಲ
ಮಳೆಗಾಲ ಸುಖವೆಲ್ಲಿ
ಎ೦ಬವಗೆ ಬರವಿಲ್ಲ (೪....)
ಪ್ರಗತಿಯ ಸೋ೦ಕಿನಲಿ
ತರು ಲತೆಯ ಸುಳಿವಿಲ್ಲ
ಮುನಿದ ಮಾತೆಯನು
ಸ೦ತೈಸೆ ಭಯವಿಲ್ಲ (೫...)
ವರುಶದಾಗೆ ಮೂರ್ಕಾಲ
ನಮ್ಮ೦ಕೆಯಲಿ ಇಲ್ಲ
ಪ್ರಕೃತಿಯ ಉಳಿಸದಿರೆ
ಮನುಜ೦ಗೆ ಉಳಿವಿಲ್ಲ (೬....)
Comments
Post a Comment