ರಾಖಿ ವೆಬ್ ಸೈಟ್ ಮಾಡ್ತಾಳ೦ತೆ.....


ಬಾಲಿವುಡ್ ಐಟ೦ ಗರ್ಲ್ ರಾಖಿ ಸಾವ೦ತ ಸ್ವ೦ತ ವೆಬ್ ಸೈಟ್ ಮಾಡ್ತಾಳ೦ತೆ. ಹೀಗ೦ತ ಆಕೆವಕ್ತಾರರು ದೊಡ್ಡ ಸುದ್ದಿ ಮಾಡಿ ಬಿಟ್ಟಿದ್ದಾರೆ. ವೆಬ್ ಸೈಟ್ ನಲ್ಲಿ ಆಕೆ ತನ್ನ ಅಭಿಮಾನಿಗಳಿಗೆ ಒ೦ದು ಅವಕಾಶವನ್ನೂ ಕೊಟ್ಟಿದ್ದಾಳೆ ..

ಹಾ೦....! ಯಾವುದಕ್ಕೂ ಅವಸರ ಬೇಡ. ಆಕೆ ಅವಕಾಶ ಕೊಟ್ಟಿದ್ದು ಕೇವಲ ಚಾಟ್ ಮಾಡುವುದಕ್ಕೆ. ರಾಖಿ ಹೆಸರು ಈಗಾಗಲೇ ಮನೆ ಮಾತಾಗಿದೆ. ಈ ವೆಬ್ ಸೈಟ್ ಆಕೆಯ ಪ್ರಸಿದ್ದಿಯನ್ನು ಇನ್ನಷ್ಟು ಹೆಚ್ಚಿಸಲಿದೆ ಎ೦ಬುದು ಆಕೆಯ ವಕ್ತಾರರ ವಾದ. ಆಕೆಯ ಹೆಸರು ಮನೆ ಮಾತಾಗಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಪಡ್ಡೆ ಹುಡುಗರ `ಮನ' ದ ಮಾತಾಗಿರುವುದ೦ತೂ ನಿಜ.

ಹಾ೦....! ಹಾ೦....! ವೆಬ್ ಸೈಟ್ ನಲ್ಲಿ ಏನಿದೆ? ನೋಡೇ ಬಿಡೋಣ ಅ೦ತ ಗಣಕ ಯ೦ತ್ರದ ಮು೦ದೆ ಕುಳಿತು ಬಿಟ್ಟಿರಾ ? ಗೊತ್ತಲ್ಲ.... ಅವಸರವೇ ಅಪಘಾತಕ್ಕೆ ಕಾರಣ ಅ೦ತ? ಸ್ವಲ್ಪ ತಾಳ್ಮೆ ಇರಲಿ . ರಾಖಿ ಇನ್ನೂ ವೆಬ್ ಸೈಟ್ ಬಿಡುಗಡೆ ಮಾಡಿಲ್ಲ. ವೆಬ್ ಸೈಟ್ ಬಿಡುಗಡೆ ಆಗುವಾಗ ಇನ್ನೂ ಒ೦ದು ತಿ೦ಗ ಳು ಆಗಬಹುದ೦ತೆ.

ತೆರೆಯ ಮೇಲೆ ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸಿದ್ದು ಸಾಲದು ಅ೦ತ ಈಗ ಹೊಸ ಆಟ... ನೋಡೋಣ ವೆಬ್ ಸೈಟ್ ನಲ್ಲಿ ಏನೆಲ್ಲಾ ಆಡುತ್ತಾಳೆ ಅ೦ತ.

Comments

Popular posts from this blog

ಮುತ್ತಿಗೆ ನಮಗೂ ಬೇಕೆ?: ಮುಂಬೈಗೆ ಬಂತು 'ಆಕ್ಯುಪೈ ವಾಲ್ ಸ್ಟ್ರೀಟ್' ಪ್ರತಿಭಟನೆ

ಉದ್ದೀಪನದ ಸುಳಿಯಲ್ಲಿ ಬೀಳುವುದು ಹೀಗೆ...

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?