Posts

ಜನರಿಗೆ ಧ್ವನಿಯಾಗುವ ನಮ್ಮ ನೋವು ಯಾರಿಗೂ ಕೇಳಿಸದೆ?

Image
ಜೀವದ ಬೆಲೆ ಏನು ಎಂಬುದನ್ನು ಪ್ರತಿಕ್ಷಣವೂ ಕಣ್ಣಾರೆ ಕಾಣುತ್ತಿದ್ದರೂ, ಜೀವದ ಹಂಗನ್ನು ಬಿಟ್ಟವರು ನಾವು. ಸಾವಿನ ಘೋರ ದೃಶ್ಯಗಳು, ಬರ್ಬರ ಹತ್ಯೆಯ ಕ್ಷಣಗಳು ಮಾನವ ಸಹಜವಾಗಿಯೇ ವಿವಿಧ ಭಾವನೆಗಳ ತಲ್ಲಣವನ್ನು ನಮ್ಮೆದೆಯಲ್ಲಿ ಎಬ್ಬಿಸಿದರೂ ಅವುಗಳ ಕಡೆಗೊಂದು ನಿರ್ಲಿಪ್ತ ದೃಷ್ಟಿಯನ್ನು ಬೀರಿ 'ವೃತ್ತಿಃ ಪರಮೋಧರ್ಮಃ' ಎಂಬ ತತ್ತ್ವಕ್ಕೆ ಬದ್ಧರಾಗಿ ಕೆಲಸ ಮಾಡುವವರು. ಇಷ್ಟು ವಿವರಣೆ ಕೊಡುವಾಗಲೇ ನಾವು ಪತ್ರಕರ್ತರು ಎಂಬುದು ಗೊತ್ತಾಗಿರಬಹುದು.  ಜೀವನವೇ ಹಾಗೆ. ಅದು ಎಳೆದುಕೊಂಡು ಹೋದತ್ತ ಸಾಗುವುದಷ್ಟೇ ಜೀವಿಗಳಿಂದ ಸಾಧ್ಯ. ಆದರೆ ಅದೆಷ್ಟೋ ಬಾರಿ ನಾವು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗುತ್ತದೆ. ತಾನು ಹೋಗೆನೆಂಬ ಹಠಮಾರಿ ಭಾವವನ್ನು ಹೊಮ್ಮಿಸುವ ಜೀವನವನ್ನು ನಮಗೆ ಬೇಕಾದ ದಿಕ್ಕಿನತ್ತ ಸೆಳೆದುಕೊಳ್ಳಬೇಕಾಗುತ್ತದೆ. ಸಾಮಾನ್ಯ ಸಮಾರಂಭಗಳಲ್ಲಿ ಭಾಗವಹಿಸಿ ವರದಿ ಮಾಡುವಾಗ ಇರುವ ನೆಮ್ಮದಿ, ಅಪರಾಧ ಜಗತ್ತಿನ ಬಗ್ಗೆ, ಯುದ್ಧದ ಕ್ಷಣಗಳ ಬಗ್ಗೆ ವರದಿ ಮಾಡುವಾಗ ಅದೆಷ್ಟೋ ದೂರಕ್ಕೆ ಓಡಿ ಹೋಗಿರುತ್ತದೆ. ಟಿವಿ ಮಾಧ್ಯಮಗಳ ಪ್ರಭಾವದಿಂದಾಗಿ 'ನಾ ಮೊದಲು ವರದಿ ಮಾಡಬೇಕು, ಬ್ರೇಕಿಂಗ್ ನ್ಯೂಸ್ ನಾನೇ ಕೊಡಬೇಕು' ಎಂಬ ಧಾವಂತ ಮುದ್ರಣ ಮಾಧ್ಯಮಗಳಲ್ಲಿ ಕೊಂಚ ಕಡಿಮೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಹಾಗಂತ ಅದೆಷ್ಟೋ ಬಾರಿ ಟಿವಿ ಮಾಧ್ಯಮಗಳಿಗಿಂತ ವೇಗವಾಗಿ, ಅವುಗಳಿಗೆ ಸಿಗದ ಸುದ್ದಿಯನ್ನು ಮುಖಪುಟದಲ್ಲೇ ಪ್ರಕಟಿಸಿದ ದಾಖಲ...

ಪರಿವರ್ತನೆಯ ಹಾದಿಯಲ್ಲಿ ಮುಸ್ಲಿಮ್ ಮಹಿಳೆ

ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವೇ ಸುಶಿಕ್ಷಿತವಾದಂತೆ. ಒಬ್ಬ ಮಹಿಳೆಗೆ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದರೆ ಒಂದು ಕುಟುಂಬವೇ ಹಕ್ಕುಗಳ ಬಗ್ಗೆ ಜಾಗೃತಗೊಂಡಂತೆ! ಈ ಮಾತು ಹೇಳಬೇಕೆನ್ನಿಸಿದ್ದು ಭಾರತೀಯ ಮುಸ್ಲಿಮ್ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುತ್ತಿರುವ ಮಹತ್ವದ ಬೆಳವಣಿಗೆಯನ್ನು ಗಮನಿಸಿದಾಗ. ಆಕೆ ನಾಝಿಯಾ ನಿಜಾಮಿ. ಗಂಡನೊಂದಿಗೆ ಸಂಸಾರ ಸರಿಹೋಗಲಿಲ್ಲ. ಪ್ರತಿದಿನ ಕಿರುಕುಳ ಕೊಡುತ್ತಿದ್ದ ಗಂಡನೊಂದಿಗೆ ಬದುಕು ಹಂಚಿಕೊಳ್ಳುವುದು, ತನಗಾಗುತ್ತಿರುವ ನೋವನ್ನು ಸಹಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸಾಧ್ಯ? ತಾಳ್ಮೆ, ಸಹನೆಯ ಕಟ್ಟೆಯೊಡೆದಾಗ ಒಳಗಿನ ನೋವು, ದುಃಖ, ಹತಾಶೆ ಹೊರಗೆ ಧುಮ್ಮಿಕ್ಕಲೇಬೇಕು, ಸಿಡಿವ ಅಗ್ನಿಪರ್ವತದಂತೆ. ನಿಜಾಮಿಯ 'ಸಹನಾಕಟ್ಟೆ'ಯೂ ಸಿಡಿಯಿತು. ಸಂಸಾರದ ಕೊಂಡಿ ತಪ್ಪಿತು. ಗಂಡ ಎನ್ನಿಸಿಕೊಂಡ ಸಯ್ಯದ್ ನದೀಮ್ 'ತಲಾಖ್' ಎಂದ. ನಿಜಾಮಿ ಬಿಡಲಿಲ್ಲ, ಜೀವನಾಂಶ ಕೇಳಿದಳು. 'ಕೊಡಕ್ಕಾಗಲ್ಲ' ಎಂದ ಸಯ್ಯದ್ ನನ್ನು ಸುಮ್ಮನೇ ಬಿಟ್ಟರೆ ತನ್ನ ಹಕ್ಕು ಕಳಕೊಂಡಂತೆ ಎಂಬ ಸತ್ಯವನ್ನು ಅರಿತುಕೊಂಡಿರುವ ನಿಜಾಮಿ ನ್ಯಾಯಾಲಯದ ಕಟಕಟೆ ಏರಿದಳು. ಕೆಳಹಂತದ ನ್ಯಾಯಾಲಯ ಆಕೆಯ ಪರವಾಗಿಯೇ ತೀರ್ಪು ನೀಡಿ, ಮಾಸಿಕ 8,000 ರು. ಜೀವನಾಂಶ ನೀಡುವಂತೆ ಸಯ್ಯದ್ ನದೀಮ್ ಗೆ ಆದೇಶ ನೀಡಿತು. ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಸಯ್ಯದ್. 'ಆಕೆಗೆ ಜೀವನಾಂಶ ಕ...

'ಮಂಗಳನಲ್ಲಿ ಗಾಂಧಿ ಚಿತ್ರ'ದ ಜಾಡು ಹಿಡಿದು

Image
ಮಂಗಳಗ್ರಹದಲ್ಲಿ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮುಖದ ಚಿತ್ರ ಕಂಡಿದೆಯಂತೆ! ಹೀಗೊಂದು ಸುದ್ದಿ ಜೂನ್ 13ರಂದು ವೈಜ್ಞಾನಿಕ ವಲಯದಿಂದ ಪುಟಿದು ಬಂತು. ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಗೂ ಮಂಗಳಗ್ರಹಕ್ಕೂ ಎತ್ತಣಿಂದೆತ್ತ ಸಂಬಂಧ? ಸಂಶೋಧನೆಯ ಇನ್ನೂ ಒಂದು ಅಂಶ ಹೇಳುವ ಪ್ರಕಾರ ಈ ಚಿತ್ರವನ್ನು 'ಮಾನವರೇ' (?) ಕೆತ್ತಿದ್ದಾರೆ. ಯಾವ ರೀತಿ ನಾವು ಶಿಲೆಯಲ್ಲಿ ಕಲೆಯನ್ನು ಕೆತ್ತುತ್ತೇವೆಯೋ ಅಂಥದ್ದೇ ಒಂದು ಚಿತ್ರಣ ಇದು. ಈ ಚಿತ್ರ ಮಾತ್ರ ಖಡಾಖಂಡಿತವಾಗಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನೇ ಹೋಲುತ್ತದೆ. ಯೂರೋಪಿನ ಮಾರ್ಸ್ ಎಕ್ಸ್ ಪ್ರೆಸ್ ಶೋಧನೌಕೆ ತೆಗೆದಂಥ ಮಂಗಳಗ್ರಹದ ಚಿತ್ರಗಳನ್ನು ಅಧ್ಯಯನ ಮಾಡಿದ ಇಟಲಿಯ ಬಾಹ್ಯಾಕಾಶ ಸಂಶೋಧಕ ಮಟ್ಟೆವೋ ಲಾನೆವೋ 'ಮಗಳನಲ್ಲಿ ಕಾಣುತ್ತಿರುವುದು ಗಾಂಧೀಜಿಯ ಚಿತ್ರ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಮೀಸೆ, ದಟ್ಟ ಹುಬ್ಬುಗಳುಳ್ಳ, ಪೂರ್ಣ ಬಕ್ಕತಲೆಯ ಈ ಚಿತ್ರವು ಸ್ಪಷ್ಟವಾಗಿ ಗಾಂಧೀಜಿಯನ್ನು ಹೋಲುತ್ತದೆ' ಎಂದು ಹೇಳುತ್ತಾರೆ. ವಾದ ಏನೇ ಇರಲಿ! ಅಲ್ಲಿ ಕಾಣುತ್ತಿರುವುದು ಗಾಂಧೀಜಿಯ ಚಿತ್ರವೇ ಆಗಲಿ, ಬೇರೆ ಯಾರದ್ದೇ ಆಗಲಿ. ಮಂಗಳಗ್ರಹದಲ್ಲಿ ಕಂಡದ್ದೆಂದು ಹೇಳಿಕೊಳ್ಳುತ್ತಿರುವ ಚಿತ್ರವೊಂದು ವೈಜ್ಞಾನಿಕ ವಲಯದಲ್ಲಿ ಭಾರೀ ಅಚ್ಚರಿಯ ಅಲೆಗಳನ್ನು ಹುಟ್ಟಿಸಿದ್ದು, ವಿಜ್ಞಾನಿಗಳಲ್ಲಿ ಮಂಗಳನ ಸಂಶೋಧನೆಯ ಬಗ್ಗೆ ಇನ್ನಷ್ಟು ಪ್ರೇರೇಪಣೆ ನೀಡಿದ್ದಂತೂ ನಿಜ. ಆದರೂ ಇಲ್ಲೊಂದು ಅನುಮ...

ಹ್ಯಾಕರ್ಸ್, ಉಗ್ರರ ಮಧ್ಯೆ ಉದಾಸ 'ಶಾಂತಿದೂತ'!

Image
ಅದ್ಯಾಕೋ 1962ರಲ್ಲಿ ನಮ್ಮ ಸರ್ಕಾರ ಮಾಡಿದಂಥ ಮೂರ್ಖತನ ಮತ್ತೆ ಮತ್ತೆ ಕಾಡುತ್ತಿದೆ. ಚೀನೀ ಸೈನಿಕರು ಟಿಬೆಟ್ ಗೆ ಬಂದು ಕುಳಿತಿದ್ದಾರೆ, ಸೇನಾ ನೆಲೆಗಳನ್ನು ಸ್ಥಾಪಿಸುತ್ತಿದ್ದಾರೆ, ರಸ್ತೆಗಳು ಮತ್ತಿತರ ಮೂಲಸೌಕರ್ಯಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಾದಾಗಲೂ ಸಹ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಮತ್ತವರ ಸಚಿವ ಸಂಪುಟದ ಸದಸ್ಯರು, ಮಿಲಿಟರಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದರು. ಏಕಾಏಕಿ ಚೀನಾ ದಾಳಿಯಿಟ್ಟಾಗ ನೆಹರು ಹೇಳಿಕೆಗಳನ್ನು ನಂಬಿದ್ದ ದೇಶದ ಜನತೆ ತಲ್ಲಣಗೊಂಡಿದ್ದರು. ಆ ಯುದ್ಧದಲ್ಲಿ ಹೀನಾಯ ಸೋಲನುಭವಿಸಬೇಕಾಗಿ ಬಂದದ್ದು, ನಮ್ಮ ಅನೇಕ ಸೈನಿಕರು ಚೀನೀಯರಿಗೆ ಸೆರೆ ಸಿಕ್ಕಬೇಕಾಗಿ ಬಂದದ್ದು ಎಲ್ಲ ಘಟನೆಗಳೂ ಈಗಲೂ ಕಣ್ಣಮುಂದೆಯೇ ನಡೆಯುತ್ತಿರುವಂತೆ ಧುತ್ತನೆ ಪ್ರತ್ಯಕ್ಷವಾಗುತ್ತವೆ. 'ಹಿಂದಿ, ಚೀನೀ ಭಾಯಿ ಭಾಯಿ' ಎಂದು ಹೇಳುತ್ತಾ ಬಗಲಲ್ಲೇ ನಿಂತುಕೊಂಡು ಗುಂಡಿನ ಮಳೆಗರೆದ ಚೀನಾವನ್ನು ಓಲೈಸುವುದಕ್ಕೆ ನಮ್ಮ ನಾಯಕರು ಈಗಲೂ ಪ್ರಯತ್ನ ಪಡುತ್ತಿದ್ದಾರೆ. ಚಿತ್ರ: ಸಂತೋಷ್ ಸಸಿಹಿತ್ಲು ಬ್ರಿಟಿಷರು ಬಿತ್ತಿದಂತಹ ಸೇಡಿನ ಬೀಜವನ್ನು ಹೆಮ್ಮರವಾಗಿ ಬೆಳೆಸಿಕೊಂಡಿರುವಂಥ ಪಾಕಿಸ್ತಾನದ್ದೂ ಇದೇ ಕಥೆ. ತನ್ನ ಸೈನಿಕರನ್ನು, ಐಎಸ್ ಐ ಏಜೆಂಟರನ್ನು ಭಾರತದೊಳಕ್ಕೆ ನುಗ್ಗಿಸಿ ಅವಾಂತರ ಸೃಷ್ಟಿಸುತ್ತಿರುವ ಪಾಕಿಸ್ತಾನದ ಬಗ್ಗೆ ನಾವು ತಳೆದಿರುವ ಮೃದು ಭಾವ ಎದೆಯಾಳಕ್ಕೆ ಭರ್ಜಿಯಿಂದ ಚುಚ್ಚಿ ...

ಈ 'ಹೋರಾಟ'ದ ಯಾನ ನಮಗೆಂದು ಸಾಧ್ಯ?

Image
Endeavour- ಅಂದರೆ ಹೋರಾಟ, ಪ್ರಯತ್ನ. ಬಾಹ್ಯಾಕಾಶದಲ್ಲಿ ಮಾನವ ಕಾಲಿಟ್ಟು, ಅಲ್ಲಿಂದ ವಿಸ್ಮಯಗಳ ಆಗರವನ್ನೇ ಬಗೆದು ನೋಡುವಂಥ ಕಲ್ಪನೆಯನ್ನು ಸಾಕಾರಗೊಳಿಸಿಕೊಳ್ಳುವ ಕನಸು ಕಂಡ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಪಾಲಿಗೆ ಅದು ನಿಜವಾದ 'ಹೋರಾಟ'ವೇ ಸರಿ. ಬಾಹ್ಯಾಕಾಶದಲ್ಲೊಂದು ನಿಲ್ದಾಣ ಸ್ಥಾಪನೆ ಮಾಡಬೇಕು, ಆ ನಿಲ್ದಾಣವನ್ನು ಅಭಿವೃದ್ಧಿಗೊಳಿಸಬೇಕು, ಬಾಹ್ಯಾಕಾಶ ಯಾತ್ರೆ ಹೊರಟಂಥ ಮಾನವ ಭೂಮಿಯಿಂದ ಒಮ್ಮಿಂದೊಮ್ಮೆಗೇ ತಲುಪಲು ಸಾಧ್ಯವಾಗದಂತಹ ಸ್ಥಳಗಳನ್ನು ತಲುಪುವುದಕ್ಕೆ ಈ ನಿಲ್ದಾಣ ನೆರವಾಗಬೇಕು, ಒಂದೊಮ್ಮೆ ಅನಿವಾರ್ಯವಾಗಿ ಗಗನನೌಕೆಗೆ ಸ್ವಲ್ಪ ವಿಶ್ರಾಂತಿ ಕೊಡಬೇಕೆಂಬ ಪರಿಸ್ಥಿತಿ ಬಂದರೂ ಇಳಿದುಕೊಳ್ಳುವುದಕ್ಕೊಂದು ನೆಲೆಯಿರಬೇಕು. ಈ ಎಲ್ಲ ಕನಸುಗಳನ್ನು ನನಸಾಗಿಸುವ ಹೋರಾಟಕ್ಕೆ ಅಣಿಯಾದಂತಹ ನಾಸಾ ಅದನ್ನು ಸಾಧಿಸಿ ತೋರಿಸಿತು. ಈ ಬಾಹ್ಯಾಕಾಶ ನಿಲ್ದಾಣವನ್ನು ಕಟ್ಟುವುದೇ ಒಂದು ಹೋರಾಟವಾಗಿತ್ತು. ಅಂಥ ಹೋರಾಟ ಯಶಸ್ವಿಯಾಗಬೇಕು ಎಂದಾದರೆ ಭೂಮಿ ಮತ್ತು ಬಾಹ್ಯಾಕಾಶದ ನಡುವಿನ ನಂಟು ಗಟ್ಟಿಯಾಗಿರಬೇಕು. ಆ ಬಂಧಕ್ಕೆ ತಡೆಯಿರಕೂಡದು. ಅಂಥದ್ದೊಂದು ಬಂಧವನ್ನು ಬೆಸುಗೆ ಹಾಕಿದ್ದು ನಾಸಾದ ಗಗನನೌಕೆ Endeavour. ಇಷ್ಟೆಲ್ಲ ಮನಃಪಟಲದಲ್ಲಿ ಹಾದು ಹೋದದ್ದು ಮೊನ್ನೆ ಜೂನ್ 1ರಂದು ಈ ಎಂಡೆವರ್ ತನ್ನ ಅಭಿಯಾನವನ್ನು ಕೊನೆಗೊಳಿಸಿದಾಗ! ಬಾಹ್ಯಾಕಾಶ ಕ್ಷೇತ್ರದಲ್ಲಿ ವಿವಿಧ ಸಾಧನೆಗಳನ್ನು ಮಾಡುವ ಕನಸು ಕಟ್ಟುತ್ತಿರುವ ಹಲವಾರು ಮನಸ್ಸುಗಳು ಭಾರತ...

ಅಮೂಲ್ಯ....

Image
ಮಾನವ ಕಂಡ ಕಂಡಲ್ಲಿ ಭೂಮಿಗೆ ತೂತು ಕೊರೆದು ನೀರಿನ ನಿಕ್ಷೆಪಗಳನ್ನೇ ನಾಶ ಮಾಡುತ್ತಿದ್ದಾನೆ. ಮತ್ತೊಂದೆಡೆ ಕಾಡುಗಳನ್ನು ಕಡಿದು ಮಳೆ ಕಡಿಮೆಯಾಗುವಂತೆ ಮಾಡಿದ್ದಾನೆ. ನೀರು ಇಂಗಿ ಅಂತರ್ಜಲ ಹೆಚ್ಚುವುದೂ ನಿಂತು ಹೋಗಿದೆ. ತೀವ್ರ ಬಾಯಾರಿದ ಕಾಗೆ ನಲ್ಲಿಯಲ್ಲಿ ನೀರು ಬರುವುದೇ ಎಂದು ಆಸೆಯಿಂದ ನೋಡುತ್ತಿದೆ. ನೀರು ಎಷ್ಟು ಅಮೂಲ್ಯ ಎಂಬುದನ್ನು ಈ ಕಾಗೆ ಮನುಷ್ಯರಿಗೆ ಹೇಳಿ ಕೊಡುತ್ತಿದೆಯೇ?

ಗೌಡ್ರು ಯಾಕ್ ಹಿಂಗೆ ಕುಂತವ್ರೆ .....

Image
ಬೆಳಗಾವಿಯಲ್ಲಿ ನಡೆದ ಜೆ. ಡಿ. ಎಸ್ ಸಮಾವೇಶದಲ್ಲಿ ದೇವೇ ಗೌಡ್ರು ಕಾಂಗ್ರೆಸ್ , ಬಿಜೆಪಿ ಯನ್ನು ಹೇಗೆ ಮಟ್ಟ ಹಾಕಲಿ ಎಂದು ಯೋಚನಾ ಮಗ್ನರಾಗಿ ಕುಳಿತ ಪರಿ ಇದು. ಅಥವಾ ಜೋರು ನಿದ್ದೆ ತೂಕಡಿಸಿ ಹಿಂಗ್ ಕುಂತರೋ ? ಯಾರಿಗ್ ಗೊತ್ತು?