ಉಗ್ರವಾದ ಪ್ರಪ೦ಚಕ್ಕೇ ಆತ೦ಕವನ್ನು ಉ೦ಟುಮಾಡಿದೆ. ಭಾರತವ೦ತೂ ಸಾಕಷ್ಟು ಬಾರಿ ಉಗ್ರಗಾಮಿಗಳ ದಾಳಿಗೆ ತುತ್ತಾಗಿದೆ. ಆದರೂ ಉಗ್ರವಾದಿಗಳನ್ನು ದಮನಿಸುವ ಕಾರ್ಯ ಮಾತ್ರ ನಡೆದಿಲ್ಲ. ಪಾಕಿಸ್ತಾನ ಭಾರತದೊ೦ದಿಗೆ ನೇರವಾಗಿ ಹೋರಾಡುವ ಧೈರ್ಯ ಇಲ್ಲದೆ ಉಗ್ರರನ್ನು ಬಳಸಿಕೊ೦ಡು ಭಾರತವನ್ನು ಸೋಲಿಸಲು ವೃಥಾ ಪ್ರಯತ್ನಿಸುತ್ತಿದೆ. ಅದೆಷ್ಟೋ ಅಮಾಯಕರು ಉಗ್ರರಿಗೆ ಬಲಿಯಾಗಿದ್ದಾರೆ. ಸತ್ತ ಉಗ್ರರ ರಕ್ತದಿ೦ದಲೇ ಹುಟ್ಟಿ ಬರುವ ಈ ರಕ್ತಬೀಜಾಸುರರನ್ನು ಸದೆ ಬಡಿಯುವ ಕಾರ್ಯ ಶೀಘ್ರವಾಗಿ ಆಗಬೇಕಿದೆ. ಉಗ್ರರೆ೦ಬ ರಕ್ತಬೀಜಾಸುರರನ್ನು ದಮನಿಸಲು, ಜಾತಿ ರಾಜಕಾರಣ ಮಾಡುವ ರಾಜಕಾರಣಿಗಳು ನಮ್ಮ ಮಹಾನ್ ಸೇನೆಗೆ ಅವಕಾಶ ನೀಡುತ್ತಾರೋ ಅಥವಾ ಇವರ ಸರ್ವ ನಾಶಕ್ಕೆ ರಕ್ತೆಶ್ವರಿಯೇ ಅವತಾರ ಎತ್ತಬೇಕೋ?
ಜನರಿಗೆ ಧ್ವನಿಯಾಗುವ ನಮ್ಮ ನೋವು ಯಾರಿಗೂ ಕೇಳಿಸದೆ?
ಜೀವದ ಬೆಲೆ ಏನು ಎಂಬುದನ್ನು ಪ್ರತಿಕ್ಷಣವೂ ಕಣ್ಣಾರೆ ಕಾಣುತ್ತಿದ್ದರೂ, ಜೀವದ ಹಂಗನ್ನು ಬಿಟ್ಟವರು ನಾವು. ಸಾವಿನ ಘೋರ ದೃಶ್ಯಗಳು, ಬರ್ಬರ ಹತ್ಯೆಯ ಕ್ಷಣಗಳು ಮಾನವ ಸಹಜವಾಗಿಯೇ ವಿವಿಧ ಭಾವನೆಗಳ ತಲ್ಲಣವನ್ನು ನಮ್ಮೆದೆಯಲ್ಲಿ ಎಬ್ಬಿಸಿದರೂ ಅವುಗಳ ಕಡೆಗೊಂದು ನಿರ್ಲಿಪ್ತ ದೃಷ್ಟಿಯನ್ನು ಬೀರಿ 'ವೃತ್ತಿಃ ಪರಮೋಧರ್ಮಃ' ಎಂಬ ತತ್ತ್ವಕ್ಕೆ ಬದ್ಧರಾಗಿ ಕೆಲಸ ಮಾಡುವವರು. ಇಷ್ಟು ವಿವರಣೆ ಕೊಡುವಾಗಲೇ ನಾವು ಪತ್ರಕರ್ತರು ಎಂಬುದು ಗೊತ್ತಾಗಿರಬಹುದು. ಜೀವನವೇ ಹಾಗೆ. ಅದು ಎಳೆದುಕೊಂಡು ಹೋದತ್ತ ಸಾಗುವುದಷ್ಟೇ ಜೀವಿಗಳಿಂದ ಸಾಧ್ಯ. ಆದರೆ ಅದೆಷ್ಟೋ ಬಾರಿ ನಾವು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗುತ್ತದೆ. ತಾನು ಹೋಗೆನೆಂಬ ಹಠಮಾರಿ ಭಾವವನ್ನು ಹೊಮ್ಮಿಸುವ ಜೀವನವನ್ನು ನಮಗೆ ಬೇಕಾದ ದಿಕ್ಕಿನತ್ತ ಸೆಳೆದುಕೊಳ್ಳಬೇಕಾಗುತ್ತದೆ. ಸಾಮಾನ್ಯ ಸಮಾರಂಭಗಳಲ್ಲಿ ಭಾಗವಹಿಸಿ ವರದಿ ಮಾಡುವಾಗ ಇರುವ ನೆಮ್ಮದಿ, ಅಪರಾಧ ಜಗತ್ತಿನ ಬಗ್ಗೆ, ಯುದ್ಧದ ಕ್ಷಣಗಳ ಬಗ್ಗೆ ವರದಿ ಮಾಡುವಾಗ ಅದೆಷ್ಟೋ ದೂರಕ್ಕೆ ಓಡಿ ಹೋಗಿರುತ್ತದೆ. ಟಿವಿ ಮಾಧ್ಯಮಗಳ ಪ್ರಭಾವದಿಂದಾಗಿ 'ನಾ ಮೊದಲು ವರದಿ ಮಾಡಬೇಕು, ಬ್ರೇಕಿಂಗ್ ನ್ಯೂಸ್ ನಾನೇ ಕೊಡಬೇಕು' ಎಂಬ ಧಾವಂತ ಮುದ್ರಣ ಮಾಧ್ಯಮಗಳಲ್ಲಿ ಕೊಂಚ ಕಡಿಮೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಹಾಗಂತ ಅದೆಷ್ಟೋ ಬಾರಿ ಟಿವಿ ಮಾಧ್ಯಮಗಳಿಗಿಂತ ವೇಗವಾಗಿ, ಅವುಗಳಿಗೆ ಸಿಗದ ಸುದ್ದಿಯನ್ನು ಮುಖಪುಟದಲ್ಲೇ ಪ್ರಕಟಿಸಿದ ದಾಖಲ...
yes. ugrara sarwanashakke pratiyobbaru pana todabeku.
ReplyDeleteyuddhada prinaamagala bgge yochisi.. " yuddha beda" nirdhaara tegedukollabahudu..
ReplyDeleteyuddhavonde parihaara alla...
ರಕ್ತೇಶ್ವರಿ ಅವತಾರ ಎತ್ತುವುದು ಅನಿವಾರ್ಯವಾಗಿದೆ!
ReplyDelete