ಬಾ ಎನ್ನ ಹೃದಯಕೆ ....


ಪರಿ ಕಾಡುತಿಹೆ ನೀನೇತಕೆ
ಬಾ ಪ್ರಿಯ ಎನ್ನ ಸನಿಹಕೆ [ಪಲ್ಲವಿ ....]


ಮರುಳಾದೆ ಇನಿಯ
ಕುಡಿಗಣ್ಣ ನೋಟಕೆ
ಮನ ಸೋತೆ ನಾ ನಿನ್ನ
ನಗುವಿನ ಮೋಡಿಗೆ [೧ ....]

ನವಿರಾದ ಕ೦ಪನವು
ತನುವಲ್ಲಿ ಮೂಡಿದರು
ನಿನ್ನೊಲವ ಕಾವಿಗೆ ಕರ -
ಗುವ ಕಾತುರವು ಎನಗೆ [೨ ....]


ಬರಡಾದ ಎದೆಯಲ್ಲಿ
ಪ್ರೀತಿಯ ಸೆಲೆ ಯುದಿಸಿ
ತೊರೆಯಾಗಿ ಹರಿಯುತಿದೆ
ಮನವೆ೦ಬ ಬನದಲ್ಲಿ [೩ ....]
ಪ್ರೇಮ ಬಾಣವ ಎಸೆದು
ಮೌನವಾದೆ ಏತಕೆ
ಎನ್ನ ತುಡಿತವ ಅರಿತು
ಬಾ ಎನ್ನ ಹೃದಯಕೆ [೪ ....][

Comments

Popular posts from this blog

ಜನರಿಗೆ ಧ್ವನಿಯಾಗುವ ನಮ್ಮ ನೋವು ಯಾರಿಗೂ ಕೇಳಿಸದೆ?

ಉದ್ದೀಪನದ ಸುಳಿಯಲ್ಲಿ ಬೀಳುವುದು ಹೀಗೆ...