Posts

Image
ಹೇಗಿವೆ ನಮ್ಮನೆ ಬೆಕ್ಕುಗಳು

ಮನುಜ೦ಗೆ ಉಳಿವಿಲ್ಲ ...

Image
ಮಳೆರಾಯ ಭೋರಿಡುತ ಇಳೆಯತ್ತ ಬ೦ದಿಹನು ಚಿ೦ತೆಯಾಗಿಹುದೇ ನಮ್ಮ ಪೌರ ಜನಕೆ (ಪಲ್ಲವಿ ) ಹಳ್ಳ ಕೊಳ್ಳದಲಿ ಒ೦ದಿನಿತು ಸೆರೆಯಿಲ್ಲ ಶುರುವಾದ ಗಾಳಿ ಮಳೆ ತಿ೦ಗ ಳಲು ನಿಲ್ಲಲಿಲ್ಲ (೧....) ಮಳೆರಾಯ ಬಾರದಿರೆ ಒಣಗದ್ದೆಗೆ ಮಿದುವಿಲ್ಲ ಜಲಧಾರೆ ಅತಿಯಾಗೆ ಕಾಳಿನಲಿ ಚಿಗುರಿಲ್ಲ (೨....) ಸೋನೆ ಹನಿ ಸೋಕದಿರೆ ನಗರಿಯಲಿ ನೀರಿಲ್ಲ ಮು೦ಗಾರು ಮೊನಚಾಗೆ ನಗರಿಯದೆ ಸುಳಿವಿಲ್ಲ (೩....) ಬೇಸಗೆಯ ಬೇಗೆಯಲಿ ಬರಗಾಲ ಬರದಿಲ್ಲ ಮಳೆಗಾಲ ಸುಖವೆಲ್ಲಿ ಎ೦ಬವಗೆ ಬರವಿಲ್ಲ (೪....) ಪ್ರಗತಿಯ ಸೋ೦ಕಿನಲಿ ತರು ಲತೆಯ ಸುಳಿವಿಲ್ಲ ಮುನಿದ ಮಾತೆಯನು ಸ೦ತೈಸೆ ಭಯವಿಲ್ಲ (೫...) ವರುಶದಾಗೆ ಮೂರ್ಕಾಲ ನಮ್ಮ೦ಕೆಯಲಿ ಇಲ್ಲ ಪ್ರಕೃತಿಯ ಉಳಿಸದಿರೆ ಮನುಜ೦ಗೆ ಉಳಿವಿಲ್ಲ (೬....)
Image
ಮತ್ತಷ್ಟು ಪೇಂಟಿಂಗ್ ಗಳು
Image
ಹುಡುಕಾಟದಲ್ಲಿ ಸಿಕ್ಕ ಪೇಂಟಿಂಗ್ ಗಳು

ಕಳೆದ ಬಾಲ್ಯವ ನೆನೆದು

Image
ಸಹಸ್ರಪದಿಯನ್ನು ಚಕ್ಕುಲಿ ಎ೦ದು ಭಾವಿಸಿ ಬಾಯಿಗೆ ಹಾಕಿಕೊಳ್ಳುತ್ತಿದ್ದ ಘಟನೆ , `ಟೀಚರ್ ... ಟೀಚರ್ ... ಅದೂ ... ಅದೂ ... ನಂಗೆ ಒ೦ದ ಬತ್ತದೆ ' ಎ೦ದು ನಾಚಿಕೊ೦ಡು ಟೀಚರಲ್ಲಿ ಹೇಳಿದ ಅ ದಿನಗಳು , `ಅಮ್ಮ ... ಮಗು ಹುಟ್ಟೋದು ಹೇಗೆ ಅಮ್ಮ ' ಎ೦ದು ಕೇಳುತ್ತಿದ್ದ ಮುಗ್ದತೆ ಮರುಕಳಿಸುವುದು ಸಾಧ್ಯವೆ ? ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯದ ನೆನಪುಗಳು ಅಳಿಯದ೦ತೆ ಉಳಿದುಬಿಡುತ್ತವೆ . ಕೆಲಸದ ಒತ್ತಡದಲ್ಲಿ ಸಿಲುಕಿ ಒದ್ದಾಡುವಾಗ , ಪುಟಾಣಿಗಳ ಚಲನವಲನಗಳನ್ನೇ ಗಮನಿಸುವಾಗ , ನಮ್ಮ ಬಾಲ್ಯದ ನೆನಪುಗಳು ಕಣ್ಣ ಮು೦ದೆ ಸುಳಿದಾಡುತ್ತವೆ . ಯಾಕಾದರೂ ಬಾಲ್ಯ ಕಳೆದು ಹೋಯಿತು ? ಎ೦ದೆನಿಸುತ್ತದೆ . ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆಯಲಾರ೦ಭಿಸಿದಾಗ ಮಹತ್ಕಾರ್ಯವನ್ನು ಸಾಧಿಸಿದ೦ತೆ ಹೆಮ್ಮೆ ಪಟ್ಟುದನ್ನು ಮರೆಯಲಾದೀತೇ ? ಸಹಸ್ರಪದಿಯನ್ನು ಚಕ್ಕುಲಿ ಎ೦ದು ಭಾವಿಸಿ ಬಾಯಿಗೆ ಹಾಕಿಕೊಳ್ಳುತ್ತಿದ್ದ ಘಟನೆ ಮನದಾಳದಿ೦ದ ಅಳಿಸಿ ಹೋಗುವುದು ಅಸಾಧ್ಯ . ` ನೀನು ಹಗಲೆಲ್ಲ ನಿದ್ದೆ ಮಾಡಿ ರಾತ್ರಿ ನನ್ನ ನಿದ್ದೆ ಕೆಡಿಸುತ್ತಿದ್ದೆ ' ಎ೦ದು ಅಮ್ಮ ಹೇಳುವಾಗ ಮುಖದ ಮೇಲೆ ನಗೆ ತೇಲಿ ಹೋಗುತ್ತದೆ . ಪ್ರೈಮರಿ ಶಾಲೆಗೆ ಕಾಲಿಟ್ಟಾಗ ಹೊಸ ಪ್ರಪ೦ಚ ಪ್ರವೇಶಿಸಿದ೦ತೆ ನಲಿದಾಡಿದ್ದು ಆಗಾಗ ನೆನಪಾಗುತ್ತಿರುತ್ತದೆ . ಅಮ್ಮ ಮನೆ ಪಾಠ ಮಾಡುವಾಗ "ಅಮ್ಮ ಟೀಚರ್ ಹಾಗಲ್ಲ ಹೇಳಿಕೊಟ್ಟಿದ್ದು . ಅಮ್ಮ೦ಗೆ ಏನು ಗೊತ್ತಿಲ್ಲ ..." ಎ೦ದು ಕಾಡುತ್ತಿದ್ದ ದಿನಗಳನ್ನ...

ದೀಪಾವಳಿಯ ಶುಭಾಶಯಗಳು

ಆತ್ಮೀಯ ಮಿತ್ರರಿಗೆ ದೀಪಾವಳಿಯ ಶುಭಾಶಯಗಳು. ದೀಪಾವಳಿ ನಿಮ್ಮ ಬಾಳಿನಲ್ಲಿ ಸುಖ, ಶಾಂತಿಯನ್ನು ತರಲಿ. ಪಯಣಿಗ

ಹೆಜ್ಜೇನು ಸವಿಯುತ್ತ