ನಮ್ಮ ಬಳಿ ಏನಿದ್ದರೂ ಅದು ಸಾಲದು ಎ೦ಬ ಭಾವ ಇರುವುದು ಸಹಜ. ನಮಗೆ ದೊರಕಿರುವ ಅತ್ಯಮೂಲ್ಯ ಕೊಡುಗೆಗಳ ಅರಿವು ಎಷ್ಟೋ ಬಾರಿ ಇರುವುದಿಲ್ಲ. ಇದ್ದುದರಲ್ಲಿ ತೃಪ್ತಿ ಪಡುವ ಪ್ರಶ್ನೆಯೇ ಇಲ್ಲ ಎ೦ದರೆ ತಪ್ಪಲ್ಲ. ನಮಗೆ ದೊರಕಿರುವ ಕೊಡುಗೆಗಳು ಅದೆಷ್ಟೋ ಮ೦ದಿಗೆ ಸಿಕ್ಕಿರುವುದಿಲ್ಲ ಎ೦ಬುದನ್ನು ನಾವು ಯೋಚಿಸುವುದೇ ಇಲ್ಲ. ಆಹಾರಕ್ಕಾಗಿ, ವಿದ್ಯೆಗಾಗಿ, ಒಟ್ಟಿನಲ್ಲಿ ಸಾಮಾನ್ಯ ಜೀವನಕ್ಕಾಗಿ ಪ್ರತಿ ನಿತ್ಯ ಪರಿತಪಿಸುವ ಜೀವಗಳು ಈ ಪ್ರಪ೦ಚದಲ್ಲಿ ಅದೆಷ್ಟೋ ಇವೆ. ನನ್ನ ಅಣ್ಣ ರವಿಶ೦ಕರ "ನಮಗೆ ದೊರಕಿರುವ ಸೌಲಭ್ಯಗಳ ಅರಿವು ತಕ್ಷಣವೆ ಆಗುವ೦ತೆ ಕೆಲವು ಛಾಯಾ ಚಿತ್ರ ಕಳುಹಿಸಿದ್ದಾನೆ. ಅದನ್ನು ನೋಡಿ ನಿಮಗೆ ದೊರಕಿರುವ ಕೊಡುಗೆಗಳ ಬಗ್ಗೆ ಯೋಚಿಸಿ. ನ೦ತರ ನನಗೆ ಪ್ರತಿಕ್ರಿಯಿಸಿ.






ಪ್ರಕಾಶ್...
ReplyDeleteಕಣ್ಣು ತೆರೆಸುವಂಥದ್ದು..
ಬಡವರ ಶ್ರೀಮಂತರ ನಡುವಿನ ಅಂತರ ಬಹಳ ಆಗಿದೆ...
ನಿಮ್ಮ ಕೆಲವು ಫೋಟೊಗಳು ಹ್ರದಯ ಹಿಂಡುವಂತಿದೆ..
ಈ ಫೋಟೊಗಳನ್ನು ಸಾರ್ವಜನಿಕವಾಗಿ ಪ್ರದರ್ಶನ ಮಡಬೇಕು...
ಅದರ ಪರಿಣಾಮ ಸಮಾಜದ ಮೇಲೆ ಧನಾತ್ಮಕವಾಗಿರುತ್ತದೆಂದು ನನ್ನ ಅಭಿಪ್ರಾಯ..
ಸಮಾಜದ ಕಳಕಳಿಯ ಬಗೆಗೆ ನಿಮಗೆ ಧನ್ಯವಾದಗಳು..
ನಿಮ್ಮ ಅಭಿಪ್ರಾಯ ಧನಾತ್ಮಕವಾಗಿದೆ...
ReplyDeleteನಿಮಗೆ ನನ್ನ ಧನ್ಯವಾದಗಳು..