ಏಕೆ ಮುನಿದಿರುವೆ ....


ಏಕೆ ಮುನಿದಿರುವೆ
ಮಾತು ಮರೆತಿರುವೆ
ಪ್ರೀತಿಯ ತ೦ತಿ ಮೀಟಿ
ಹಾಡು ಎನ್ನ ಕೋಗಿಲೆ [ಪಲ್ಲವಿ ....]


ಎದೆಯಾಳದಿ ಮೂಡಿಹ

ಈ ಪ್ರೇಮ ಕಾವ್ಯಕೆ
ನೀ ಸಿರಿ ಕ೦ಠದ ದನಿ
ನೀಡೆಯಾ ಕೋಗಿಲೆ [೧ ....]


ಮಾರನ ಹೂ ಬಾಣಕೆ
ಸೋತು ಶರಣಾಗಿರುವೆ
ರತಿಯಾಗಿ ಬಾ , ನೀ ಎನ್ನ
ಹೃದಯದ ತಾಣಕೆ [೨ ....]


ಉರಿಯುತಿಹೆ ನು ನಾ
ವಿರಹಾಗ್ನಿಯ ತಾಪಕೆ
ಒಲವಿನ ಸುಧೆಯಾಗಿ
ಕಾವಾರಿಸು ಬೇಗನೆ [೩ ....]


ನನ್ನುಸಿರ ತಾಳಕೆ
ನಿನ್ನುಸಿರ ಲಾಸ್ಯವ
ಬೆರೆಸಿ ಜತೆಯಾಗು ಬಾ
ಎನ್ನ ಬಾಳ ಪಯಣಕೆ [೪ ....]

Comments

Popular posts from this blog

ಜನರಿಗೆ ಧ್ವನಿಯಾಗುವ ನಮ್ಮ ನೋವು ಯಾರಿಗೂ ಕೇಳಿಸದೆ?

ಮನುಜ೦ಗೆ ಉಳಿವಿಲ್ಲ ...